ಬೆಂಗಳೂರು: ಎಂಟು ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ 800 ಕೋಟಿ ಕಲೆಕ್ಷನ್ ಮಾಡಿದೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನ ಒಂದು ವಾರದಲ್ಲಿ ಸಿನಿಮಾ ನೋಡಿದ್ದಾರೆ ಎನ್ನಲಾಗಿದೆ.
ನಟ ಯಶ್ ಅಭಿನಯ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಹಾಗು ನಿರ್ಮಾಪಕ ವಿಜಯ್ ಕಿರಂಗದೂರ್ ಅದ್ಧೂರಿ ವೆಚ್ಚದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡುತ್ತಿದ್ದು, 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಏಪ್ರಿಲ್ 14ರಂದು ಸಿನಿಮಾ ಬಿಡುಗಡೆ ಆಗಿದ್ದು, ನಿನ್ನೆಗೆ ಒಂದು ವಾರದ ಯಶಸ್ವಿ ಪ್ರದರ್ಶನವಾಗಿದೆ. ಈ ಸಿನಿಮಾ ವಿಶ್ವಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಹಿಂದೆ ಸಂಸ್ಥೆ ಹೇಳಿದಂತೆ ವಿದೇಶ ಹೊರತುಪಡಿಸಿ ಭಾರತದಲ್ಲೇ ಮೊದಲನೇ ದಿನ 134.5 ಕೋಟಿ, ಎರಡನೇ ದಿನ ಭಾರತದಲ್ಲಿ 240 ಕೋಟಿ ಸಂಪಾದಿಸಿತ್ತು. ನಾಲ್ಕನೇ ದಿನದಲ್ಲಿ ವಿಶ್ವಾದ್ಯಂತ 540 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ