ಜೊಹಾನ್ಸ್‌ಬರ್ಗ್: 70 ವರ್ಷ ಹಳೆಯ ಹಿಂದೂ ದೇವಸ್ಥಾನ ಸೇರಿದಂತೆ ದಕ್ಷಿಣ ಆಫ್ರಿಕಾದ ಡರ್ಬನ್ ನಗರದ ಚಾಟ್ಸ್‌ವರ್ತ್‌ನಲ್ಲಿದ್ದ ಹಲವಾರು ಕಟ್ಟಡಗಳು ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ನಾಶವಾಗಿದೆ.
ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆ ಭಾರಿ ಪ್ರವಾಹ ಸಂಭವಿಸಿದೆ. ನದಿಯ ದಡದಲ್ಲಿದ್ದ ದೇವಸ್ಥಾನವು ಸಂಪೂರ್ಣವಾಗಿ ಕುಸಿದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
ಕನಿಷ್ಠ 45 ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದ್ದಾರಿಗಳು, ನಗರ ರಸ್ತೆಗಳು, ಹಲವು ಕಾರುಗಳು ಕೊಚ್ಚಿಹೋಗಿವೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ