ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಎಪ್ರಿಲ್ 19 ರಿಂದ ಯುರೇಕಾ ರಾಜ್ಯ ಮಟ್ಟದ ವಿಜ್ಞಾನ ಶಿಬಿರ

Upayuktha
0

ಪುತ್ತೂರು: ಹತ್ತನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡ ಬಯಸುವ ವಿದ್ಯಾರ್ಥಿಗಳಿಗಾಗಿ ಹನ್ನೆರಡು ದಿನಗಳ ರಾಜ್ಯ ಮಟ್ಟದ ವಿಜ್ಞಾನ ಶಿಬಿರ "ಯುರೇಕಾ-2022" ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಎಪ್ರಿಲ್ 19 ರಿಂದ 30 ರವರೆಗೆ ನಡೆಯಲಿರುವ ಈ ಶಿಬಿರವು ವಿದ್ಯಾರ್ಥಿಗಳನ್ನು ತಮ್ಮ ಮುಂದಿನ ಪಿಯುಸಿ ವಿಜ್ಞಾನ ವಿಷಯಗಳ ಅಧ್ಯಯನಕ್ಕೆ ಮಾನಸಿಕವಾಗಿ ಸಿದ್ಧಗೊಳಿಸುವ ಉದ್ದೇಶ ಹೊಂದಿದೆ. ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿರುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ಪ್ರವೇಶಾವಕಾಶವಿದೆ.


ಇದರಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸೇತು ಬಂಧ ತರಗತಿಗಳು, ಜೆಇಇ, ನೀಟ್, ಸಿ.ಇ.ಟಿ, ಕೆವಿಪಿವೈ, ಮತ್ತು ಎನ್.ಟಿ.ಎಸ್.ಇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮ ವಿಶ್ವಾಸದಿಂದ ಸುಲಭವಾಗಿ ಎದುರಿಸುವಂತೆ ಸಜ್ಜುಗೊಳಿಸುವ ತರಬೇತಿಗಳನ್ನು ಆಯೋಜಿಸಲಾಗಿದೆ. ವಿವಿಧ ಚಟುವಟಿಕೆಗಳೊಂದಿಗೆ ಕಲಿಕೆ ಪ್ರಯೋಗಗಳ ಮೂಲಕ ವಿಜ್ಞಾನದ ಅರ್ಥೈಸುವಿಕೆ ಮಾಡಲಾಗುತ್ತದೆ. ಐ.ಒ.ಟಿ. ಲ್ಯಾಬ್ ಗಳಲ್ಲಿ ಇಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಗಳ ರಚನೆ ಮತ್ತು ಪಝಲ್‌ಗಳ ಮೂಲಕ ಚಿಂತನಾ ವೇಗವನ್ನು ಹೆಚ್ಚಿಸುವ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.


ಜೊತೆಗೆ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಜೊತೆ ಸಂವಾದ, ಉಡುಪಿಯ ಬಾಹ್ಯಾಕಾಶ ಹವ್ಯಾಸಿ ವೀಕ್ಷಕರ ಸಂಸ್ಥೆ PAAC ನ ಭೌತ ವಿಜ್ಞಾನಿ ಡಾ. ಎ.ಪಿ. ಭಟ್ ರವರಿಂದ ಬಾಹ್ಯಾಕಾಶ ಕೌತುಕಗಳ ಬಗ್ಗೆ ಮಾಹಿತಿ ಮತ್ತು ಆಕಾಶ ವೀಕ್ಷಣೆ, ಆಕಾಂಕ್ಷಾ ತಂಡದವರಿಂದ ವ್ಯಕ್ತಿತ್ವ ವಿಕಸನ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಪ್ರಯೋಗಗಳ ಕಲಿಕೆ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಬಿರವು ಪ್ರತಿದಿನ ಮುಂಜಾನೆ 10.00ಕ್ಕೆ ಆರಂಭವಾಗಿ ಸಂಜೆ 3.30ಕ್ಕೆ ಕೊನೆಗೊಳ್ಳುತ್ತದೆ. ಅಗತ್ಯವಿರುವ ದೂರದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯ ಮಾಡಿಕೊಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು 8904791909, 9480198001, 9880265305 ಈ ಫೋನ್ ನಂಬರ್ ಗಳನ್ನು ಸಂಪರ್ಕಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top