|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಮಕ್ಕಳಿಗೆ ರಂಗ ತರಬೇತಿ ಶಿಬಿರ

ಧರ್ಮಸ್ಥಳದಲ್ಲಿ ಮಕ್ಕಳಿಗೆ ರಂಗ ತರಬೇತಿ ಶಿಬಿರ

ಮೋಜು ಮಸ್ತಿ, ಮಕ್ಕಳಿಗೆ ಆಸ್ತಿ, ಶಿಬಿರಗಳಿಂದ ಸಾಮೂಹಿಕ ಬದುಕಿನ ಪಾಠ


ಹೇಮಾವತಿ ವೀ. ಹೆಗ್ಗಡೆಯವರು ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿದರು.


ಉಜಿರೆ: ಮೋಜು ಮಸ್ತಿ ಮಕ್ಕಳಿಗೆ ಆಸ್ತಿಯಾಗಿದ್ದು ರಂಗ ತರಬೇತಿ ಶಿಬಿರಗಳಿಂದ ಸಾಮೂಹಿಕ ಬದುಕಿನ ಪಾಠ ಕಲಿಯಬಹುದು ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.


ಅವರು ಬುಧವಾರ ಧರ್ಮಸ್ಥಳದಲ್ಲಿ ರಂಗಶಿವ ಕಲಾಬಳಗದ ಆಶ್ರಯದಲ್ಲಿ 15 ದಿನಗಳ ಕಾಲ ಆಯೋಜಿಸಿದ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಶಿಬಿರದಲ್ಲಿ ಯಾವುದೇ ರೀತಿಯ ಭಯ, ಆತಂಕ ಬೇಡ, ಶಿಸ್ತು, ನಿಯಮಗಳ ಒತ್ತಡ ಇರಬಾರದು. ಮಕ್ಕಳು ಉತ್ಸಾಹದಿಂದ ಮುಕ್ತವಾಗಿ ಬೆರೆತು, ತಮ್ಮಲ್ಲಿರುವ ಕಲೆ, ಸುಪ್ತ ಪ್ರತಿಭೆಗಳ ಅಭಿವ್ಯಕ್ತಿಯೊಂದಿಗೆ ಸೃಜನಶೀಲಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಮ್ಮ ಸುತ್ತಮುತ್ತಲಿರುವ ಗಿಡ-ಮರಗಳು, ಪ್ರಾಣಿ-ಪಕ್ಷಿಗಳು, ಹಣ್ಣುಗಳು, ಹೂಗಳ ಬಗ್ಯೆ ಮಾಹಿತಿ ಕಲೆ ಹಾಕಬೇಕು. ಅನ್ನ, ಆಹಾರ ಅಪವ್ಯಯ ಮಾಡುವುದಿಲ್ಲ. ಪ್ರಕೃತಿ-ಪರಿಸರ ಸಂರಕ್ಷಣೆ ಮಾಡುತ್ತೇವೆ ಎಂದು ಶಿಬಿರಾರ್ಥಿಗಳು ದೃಢ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಅಜ್ಜಿ ಮನೆಗೆ ಹೋದವರಿಗೆ ಸಾಕಷ್ಟು ಅನುಭವ ಸಿಗುತ್ತದೆ. ಬಾಲ್ಯದಲ್ಲಿ ಪಿಣಪಿಲ ಅರಮನೆಗೆ ರಜೆಯಲ್ಲಿ ಹೋದಾಗ ಮಾವು, ಹಲಸು, ಗೇರು ಹಣ್ಣು ತಿಂದ ಅನುಭವ, ಹಿರಿಯರೊಂದಿಗೆ ಮತ್ತು ಕಿರಿಯರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆತ ಅನುಭವ, ಎತ್ತಿನ ಗಾಡಿಯಲ್ಲಿ ಹೋಗಿ ಯಕ್ಷಗಾನ ಬಯಲಾಟವನ್ನು ನೋಡಿರುವುದು, ನದಿ, ಕರೆಯಲ್ಲಿ ಈಜಾಡಿದ ಅನುಭವವನ್ನು ಧನ್ಯತೆಯಿಂದ ಸ್ಮರಿಸಿದರು.


ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಪ್ರಕೃತಿ-ಪರಿಸರ ವೀಕ್ಷಣೆ, ವನವಿಹಾರ, ಹಾವುಗಳು ಹಾಗೂ ಪ್ರಾಣಿ-ಪಕ್ಷಿಗಳ ಪರಿಚಯ, ನಾಟಕ ತರಬೇತಿ, ಜನಪದ ಹಾಡುಗಳು, ಅಜ್ಜಿ ಕಥೆಗಳು ಇತ್ಯಾದಿ ವೈವಿಧ್ಯಮಯ ಚಟುವಟಿಕೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ರಾಜೇಶ್ ಧನ್ಯವಾದವಿತ್ತರು. ಸುನಿಲ್ ಶೆಟ್ಟಿ ಕಲ್ಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

ನೂರು ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post