ಮರೋಳಿಯಲ್ಲಿ ʼಬಿಸು ಪರ್ಬʼ ಆಚರಣೆ

Chandrashekhara Kulamarva
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ  ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಮರೋಳಿಯ ಶ್ರೀರಾಮ ಭಜನಾ ಮಂಡಳಿ (ರಿ) ಜಂಟಿಯಾಗಿ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಶ್ರೀರಾಮ ಭಜನಾ ಮಂದಿರದಲ್ಲಿ ಎಪ್ರಿಲ್ 15 ರಂದು ರಾತ್ರಿ 7:30ಕ್ಕೆ ʼಬಿಸು ಪರ್ಬʼ ಆಚರಣೆ ಏರ್ಪಡಿಸಲಾಗಿದೆ.


ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ ಪಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ಮರೋಳಿ, ಪಾಲಿಕೆ ಸದಸ್ಯ ಕೇಶವ ಮರೋಳಿ, ಉದ್ಯಮಿ ಗುಣನಾಥ ಬಂಗೇರ, ಮರೋಳಿ ಗ್ರಾಮ ಸಮಿತಿ ಅಧ್ಯಕ್ಷ ಹರಿಣಾಕ್ಷ ಭಂಡಾರಿ, ಕಾರ್ಮಿಕ ಭವಿಷ್ಯ ನಿಧಿ ನಿವೃತ್ತ ಲೆಕ್ಕಾಧಿಕಾರಿ ಚಂದ್ರಹಾಸ ಕಣಂತೂರು ಮೊದಲಾದವರು ಅತಿಥಿಗಳಾಗಿರಲಿದ್ದಾರೆ. 


ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತುಳು ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ, ಕಾರ್ಯಕ್ರಮ ಸಂಯೋಜಕರಾದ ಡಾ. ವಿನೋದಾ, ವೀಣಾ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿರಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
To Top