|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬದಿಯಡ್ಕದಲ್ಲಿ ಸಂಪನ್ನಗೊಂಡ ಬಾಳೆಮೇಳ

ಬದಿಯಡ್ಕದಲ್ಲಿ ಸಂಪನ್ನಗೊಂಡ ಬಾಳೆಮೇಳ

ಕಲುಷಿತ ವಾತಾವರಣದ ಬದುಕಿನ ಮಧ್ಯದಿಂದ ಹೊರಬರಬೇಕು: ರವೀಶ ತಂತ್ರಿ ಕುಂಟಾರು



ಬದಿಯಡ್ಕ: ಕಲುಷಿತ ವಾತಾವರಣದ ಮಧ್ಯೆ ನಮ್ಮ ಬದುಕು ಸಾಗುತ್ತಿರುವ ಬೇಸರ ನಮ್ಮಲ್ಲಿದ್ದರೂ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ದಿಟ್ಟ ಹೆಜ್ಜೆಯೊಂದಿಗೆ ಸಮಾಜಮುಖೀ, ಸಮಾಜಸುಖೀ ಯೋಜನೆಗಳನ್ನು ಆಯೋಜಿಸುತ್ತಾ ಸಂಸ್ಕಾರಭರಿತ ಬದುಕಿನ ಸವಿಯನ್ನು ಉಣಬಡಿಸುತ್ತಿದ್ದಾರೆ. ಗೋಕರ್ಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪ್ರಾರಂಭಿಸಿ ವಿಶ್ವವಂದ್ಯರಾಗಿದ್ದಾರೆ. ಇಂತಹ ಸಂತರು ಮಹಾಂತರು ಪೀಠಾಧಿಪತಿಗಳು ಇವರು ಭವಿಷ್ಯತ್ತಿಗಾಗಿ ಹಮ್ಮಿಕೊಳ್ಳುವ ಕಾರ್ಯಯೋಜನೆಗಳಲ್ಲಿ ನಾವೆಲ್ಲರೂ ಒಳ್ಳೆಯ ಮನಸ್ಸಿನಿಂದ ಕೈಜೋಡಿಸಬೇಕು ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.


ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಮಹಿಳೋದಯ ಬದಿಯಡ್ಕ ಇವರ ನೇತೃತ್ವದಲ್ಲಿ ನಡೆದ ವಿವಿವಿ ಪಾಕಲೋಕ 22 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪಾರಂಪರಿಕ ಜೀವನಶೈಲಿಯಿಂದ ವಿಮುಖರಾಗಿ ಆಧುನಿಕತೆಯ ಜೀವನ ಶೈಲಿಯನ್ನು ಆಲಂಗಿಸುತ್ತಿರುವ ಎಲ್ಲರಿಗೂ ಇವತ್ತಿನ ವಿಶಿಷ್ಟ ವಿಶೇಷ ವಿಷಮುಕ್ತ ಪಾಕಲೋಕ ಒಳ್ಳೆಯ ಪಾಠವನ್ನು ನೀಡುತ್ತಿದೆ. ಎಲ್ಲರಿಂದಲೂ ತುಚ್ಛೀಕರಣಕ್ಕೆ ಒಳಗಾದ ಬಾಳೆ ಗಿಡದ ಸರ್ವತೋಮುಖ ಉಪಯೋಗಗಳ ಬಗ್ಗೆ ಇಲ್ಲಿ ಅನಾವರಣ ಗೊಳ್ಳುತ್ತಿರುವುದು ಶ್ಲಾಘನೀಯ. 100ಕ್ಕೂ ಅಧಿಕ ಬಾಳೆ ಉತ್ಪನ್ನಗಳನ್ನು ಪರಿಚಯಿಸಿರುವುದು ಕಾರ್ಯಕರ್ತರ, ಮಾತೆಯರ ಸಾಧನೆಯೇ ಸರಿ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಿ ಮಾತನಾಡುತ್ತಾ ಊರಿನಲ್ಲಿ ಇನ್ನಷ್ಟು ಇಂತಹ ಗ್ರಾಮೀಣ ಆಹಾರ ಮೇಳಗಳು ನಡೆಯುತ್ತಿರಲಿ ಎಂದು ಹಾರೈಸಿದರು.


ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಮಾತನಾಡಿ ಬದಿಯಡ್ಕ ಗ್ರಾಮಪಂಚಾಯಿತಿಯು ತನ್ನ ಪ್ರಧಾನ ಬೆಳೆಯಾಗಿ ಬಾಳೆ ಕೃಷಿಯನ್ನು ಆಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು. ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಮಾತನಾಡುತ್ತಾ ಬಾಳೆ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಬಲೀಕರಣಗೊಳಿಸುವ ಬಗ್ಗೆ ಕ್ಯಾಂಪ್ಕೋ ಆಸಕ್ತಿವಹಿಸಿ ಕಾರ್ಯಪ್ರವೃತ್ತವಾಗುತ್ತಿದೆ. ಇವತ್ತಿನ ಈ ಬಾಳೆಯ ಪಾಕಲೋಕ ಇದಕ್ಕೆ ಇನ್ನಷ್ಟು ಸ್ಪೂರ್ತಿಯನ್ನು ತುಂಬಿದೆ ಎಂದು ನುಡಿದರು.


ವಿವಿವಿ ಪಾಕಲೋಕ ಸಮಿತಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಸ್ವಾಗತಿಸಿ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿದರು. ವೇದಿಕೆಯಲ್ಲಿ ಡಾ. ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಶ್ರೀಕೃಷ್ಣ ಭಟ್ ಮೀನಗದ್ದೆ ಉಪಸ್ಥಿತರಿದ್ದರು. ಮಾನಸ ಮುಣ್ಚಿಕ್ಕಾನ ಹಾಗೂ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನಿರೂಪಿಸಿದರು.

.....

ಹಲವು ಶತಮಾನಗಳಿಂದ ನಮ್ಮ ಕೃಷಿಕರು ಬಾಳೆಯ ವಿವಿಧ ಉತ್ಪನ್ನಗಳನ್ನು ಉಪಯೋಗಿಸಿ ಜೀವನವನ್ನು ಮಾಡಿಕೊಂಡು ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಳೆಯ ಬಗ್ಗೆ ನಿರಾಸಕ್ತಿ ಮೂಡಿದ ಸಂದರ್ಭದಲ್ಲಿ ಇಂತಹ ಒಂದು ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ.

-ಶಾಂತಾ ಬಾರಡ್ಕ, ಬದಿಯಡ್ಕ ಗ್ರಾಪಂ ಅಧ್ಯಕ್ಷೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم