ಮಂಗಳೂರು: ಯಕ್ಷಗಾನದ ಹೆಸರಾಂತ ಬಲಿಪ ಮನೆತನದ ಬಲಿಪ ಪ್ರಸಾದ ಭಾಗವತರ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಪಯುಕ್ತ ನ್ಯೂಸ್ ಜತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಅವರು, ಜನವರಿ ತಿಂಗಳಲ್ಲಿ ಪಡುಬಿದ್ರೆಯಲ್ಲಿ ಬಲಿಪ ಪ್ರಸಾದ ಭಾಗವತರಿಗೆ 'ಪೂಲ ವಿಠಲ ಶೆಟ್ಟಿ ಪ್ರಶಸ್ತಿ' ನೀಡಿ ಗೌರವಿಸಿದ ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ.
ಅವರದೇ ಮಾತುಗಳಲ್ಲಿ...
ಬಲಿಪ ಪ್ರಸಾದ ಭಾಗವತರನ್ನು ಸಂಮಾನಿಸಲು ಜನವರಿ ತಿಂಗಳಲ್ಲಿ ಅವಕಾಶ ಸಿಕ್ಕಿತ್ತು. ಪಡುಬಿದ್ರೆಯಲ್ಲಿ "ಪೂಲ ವಿಠಲ ಶೆಟ್ಟಿ ಪ್ರಶಸ್ತಿ" ನೀಡಿ ಗೌರವಿಸುವಾಗ ಸತೀಶ್ ವಿಠಲ ಶೆಟ್ಟಿಯವರು ಗೌರವ ಧನದೊಂದಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ಕವರ್ ನೀಡಿದ್ದರು.
ಪ್ರಸಾದ ಬಲಿಪರ ಅಣ್ಣ ಶಿವಶಂಕರ ಬಲಿಪರು ಅಂದು ಭಾಗವತಿಕೆ ಮಾಡಿದ್ದರು. ಬಹುಶಃ ಪ್ರಸಾದ ಬಲಿಪರ ಕೊನೆಯ ಸಂಮಾನ ಅದುವೇ ಆಗಿರಬೇಕು.
ಕಟೀಲು ವಾಸುದೇವ ಆಸ್ರಣ್ಣರು, ಲಕ್ಷ್ಮೀನಾರಾಯಣ ಆಸ್ರಣ್ಣರು, ವೆಂಕಟರಮಣ ಆಸ್ರಣ್ಣರು, ಅನಂತ ಪದ್ಮನಾಭ ಆಸ್ರಣ್ಣರು, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಯವರ ಉಪಸ್ಥಿತಿಯಲ್ಲಿ. ಪಡುಬಿದ್ರೆ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ.
ಬಲಿಪರು ಮಾರಕ ರೋಗಕ್ಕೆ ತುತ್ತಾಗಿದ್ದ ವಿಚಾರ ಆರಂಭದಲ್ಲೇ ತಿಳಿದಿತ್ತು. ಗುಣಮುಖರಾಗಬೇಕೆಂಬ ಪ್ರಾರ್ಥನೆ ಮಾಡಿದ ಅಸಂಖ್ಯ ಯಕ್ಷಾಭಿಮಾನಿಗಳಲ್ಲಿ ನಾನೂ ಒಬ್ಬ.
ಬಲಿಪ ನಾರಾಯಣ ಭಾಗವತರಿಗೆ ಪುತ್ರಶೋಕ ಭರಿಸುವ ಶಕ್ತಿಯನ್ನು ಭ್ರಮರಾಂಬೆ ಅನುಗ್ರಹಿಸಲಿ.
ಪತ್ನಿ, ಮಕ್ಕಳು, ಪರಿವಾರದ ದುಃಖ ದಲ್ಲಿ ನಾವೂ ಸಹಭಾಗಿಗಳು.
ಓಂ ಶಾಂತಿ.
ಕದ್ರಿ ನವನೀತ ಶೆಟ್ಟಿ
ಸದಸ್ಯರು
ಕರ್ನಾಟಕ ಯಕ್ಷಗಾನ ಅಕಾಡಮಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ