|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನರರೋಗ ಸಂಬಂಧಿತ ಖಾಯಿಲೆಗಳ ಉಚಿತ ವೈದ್ಯಕೀಯ ಶಿಬಿರ

ನರರೋಗ ಸಂಬಂಧಿತ ಖಾಯಿಲೆಗಳ ಉಚಿತ ವೈದ್ಯಕೀಯ ಶಿಬಿರ


ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ನರರೋಗü ಸಂಬಂಧಿತ ಖಾಯಿಲೆಗಳ ಉಚಿತ ವೈದ್ಯಕೀಯ ಶಿಬಿರವು ಸೋಮವಾರದಂದು ಆರಂಭಗೊಂಡಿತು. ಶಿಬಿರದ ಉದ್ಘಾಟನೆಯನ್ನು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಜಿತ್ ಎಂ. ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಮಂಜುನಾಥ ಭಟ್, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ವಿಕ್ರಮ್ ಕುಮಾರ್ ಹಾಗೂ ಕಾಲೇಜಿನ ಇತರ ಪ್ರಾಧ್ಯಾಪಕರುಗಳು ಪಾಲ್ಗೊಂಡಿದ್ದರು.


ಕಾಲೇಜಿನ ಪಂಚಕರ್ಮ ವಿಭಾಗದ ಪ್ರಾಧ್ಯಾಪಿಕೆ ಡಾ. ರೋಹಿಣಿ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು.  

ಎಪ್ರಿಲ್ 11 ರಿಂದ 17 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಕಂಪವಾತ, ಸಯಾಟಿಕಾ, ಡಿಸ್ಕ್ ಅಸ್ವಸ್ಥತೆಗಳನ್ನೊಳಗೊಂಡ ಕುತ್ತಿಗೆ ಮತ್ತು ಬೆನ್ನು ನೋವುಗಳು, ನರದೌರ್ಬಲ್ಯ, ಮರಗಟ್ಟುವಿಕೆ, ಬಲಹೀನತೆ ಮುಂತಾದ ನರ ಸಂಬಂಧಿ ರೋಗಗಳಿಗೆ ಉಚಿತ ತಪಾಸಣೆ, ಔಷಧಿ, ಸಲಹೆ, ಜೀವನ ಶೈಲಿ, ಆಹಾರ ಕ್ರಮದ ಸವಿವರ ಸಂಪೂರ್ಣ ಮಾಹಿತಿ ನೀಡಲಾಗುವುದು. ಅಗತ್ಯವಿದ್ದಲ್ಲಿ ಪಂಚಕರ್ಮ ಚಿಕಿತ್ಸೆ ಹಾಗೂ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆಯನ್ನು ರಿಯಾಯತಿ ದರದಲ್ಲಿ ಒದಗಿಸಲಾಗುವುದು. ಸಾರ್ವಜನಿಕರು ಈ ಉಚಿತ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post