ಎಸ್ಸೆಸ್ಸೆಲ್ಸಿ ನಂತರ ಮುಂದೇನು?: ಏ. 21ಕ್ಕೆ ವಿವಿವಿ ಮಾರ್ಗದರ್ಶನ ಶಿಬಿರ

Upayuktha
0


ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಜ್ಞಾನ ವಿಜ್ಞಾನ ಚಿಂತನ ಸತ್ರದ ಏಳನೇ ಕಾರ್ಯಕ್ರಮವಾಗಿ ಈ ತಿಂಗಳ 21ರಂದು 'ನನ್ನ ಮುಂದಿನ ದಾರಿ' ಎಂಬ ಆನ್‍ಲೈನ್ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗಿದೆ.


ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬ ಬಗ್ಗೆ ತಜ್ಞರೊಡನೆ ಮುಕ್ತ ಸಂವಾದಕ್ಕೆ ಅವಕಾಶವಿದೆ ಎಂದು ವಿದ್ಯಾ ಪರಿಷತ್ ಉಪಾಧ್ಯಕ್ಷ ಪ್ರೊ. ಮರುವಳ ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಗುರುವಾರ ರಾತ್ರಿ 7.00ರಿಂದ ಝೂಮ್ ಮೀಟಿಂಗ್‍ನಲ್ಲಿ (ಮೀಟಿಂಗ್ ಕೋಡ್: 82482498828; ಪಾಸ್‍ಕೋಡ್: 597398)ಈ ಮಾರ್ಗದರ್ಶನ ಶಿಬಿರ ನಡೆಯಲಿದೆ.


ಪುಣೆ ಬಿಜೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಡಾ.ಶ್ರೀಶ ಪಾರ್ಥಾಜೆ, ಬೆಂಗಳೂರು ಐಐಎಸ್ಸಿ ಸಂಶೋಧನಾ ವಿದ್ಯಾರ್ಥಿ ಶ್ರೀಗಣೇಶ್ ನೀರಮೂಲೆ, ಪ್ಯಾರಿಸ್‍ನ ಇಎಸ್‍ಎಸ್‍ಇಸಿಯಲ್ಲಿ ವ್ಯವಸ್ಥಾಪನಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅನಿರುದ್ಧ್ ಶರ್ಮಾ, ಎನ್‍ಐಟಿಕೆ ಬಿಟೆಕ್ ವಿದ್ಯಾರ್ಥಿ ವಿನೀತ್ ನಾರಾಯಣ್ ಪಿ, ಹೆಬ್ಬಾಳ ಪಶು ಸಂಗೋಪನಾ ಕಾಲೇಜಿನ ಪದವಿ ವಿದ್ಯಾರ್ಥಿ ಶ್ರೀಪಾದ್ ಶ್ರೀಧರ್ ಹೆಗಡೆ ಚಪ್ಪರಮನೆ, ಹಾವೇರಿ ಆಯರ್ವೇದ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ.ಶರದ್ ಕುಮಾರ್ ಎಂ, ಶಿವಮೊಗ್ಗ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಉಲ್ಲಾಸ ಎಂ.ವೈ, ಅಮೆರಿಕದ ಬೋಸ್ ಕಾರ್ಪೋರೇಷನ್‍ನ ಕೃಷ್ಣ ಭಟ್, ಉಡುಪಿ ಎಸ್‍ಡಿಎಂ ಆಯರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಎನ್.ಸ್ವಾತಿ, ಫಿನ್ಲೆಂಡ್ ಊಲು ವಿವಿಯ ಸಂಶೋಧನಾ ವಿಜ್ಞಾನಿ ಡಾ.ವಿನಾಯಕ್ ದಾಮ್ಲೆ, ವಿಂಗ್ ಕಮಾಂಡರ್ ಶಿವ ಕಾಕುಂಜೆ, ಡಿಆರ್‍ಡಿಓ ವಿಜ್ಞಾನಿ ಡಾ.ಮಹಾದೇವ ಭಟ್ ಮತ್ತಿತರರು ಮಾರ್ಗದರ್ಶನ ನೀಡುವರು ಎಂದು ವಿವರಿಸಿದ್ದಾರೆ.


ವಿದ್ಯಾ ಪರಿಷತ್ ಅಧ್ಯಕ್ಷ ಪ್ರೊ.ಎಂ.ಆರ್.ಹೆಗಡೆ, ಪ್ರಾಚಾರ್ಯ ಮಹೇಶ್ ಹೆಗಡೆ, ವರಿಷ್ಠಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ ಮತ್ತಿರರರು ಭಾಗವಹಿಸುವರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದ್ದಾರೆ.

ವಿದ್ಯಾರ್ಥಿಯ ಮನೋಭಾವಕ್ಕೆ ತಕ್ಕಂಥ ವಿಷಯವನ್ನು ಪಿಯುಸಿಯಲ್ಲಿ ಆಯ್ಕೆ ಮಾಡುವುದು ಮುಖ್ಯ. ಈ ಬಗೆಗೆ ಮಾಹಿತಿ ಕೊರತೆಯಿಂದಾಗಿ ಯಾವುದೋ ವಿಷಯ ಆಯ್ಕೆ ಮಾಡಿಕೊಂಡು ಆ ನಂತರ ಪಶ್ಚಾತ್ತಾಪ ಪಡುವ ವಿದ್ಯಾರ್ಥಿಗಳೂ ಇದ್ದಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.


ಪಿಯುಸಿಯಲ್ಲಿ ವಿಜಾÐನ ವಿಷಯವನ್ನು ತೆಗೆದುಕೊಂಡರೆ ಮುಂದೇನು ಮಾಡಬಹುದು ಎಂಬ ಬಗೆಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿ ಈಗ ಮುಂದಿನ ಉನ್ನತ  ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಜತೆಯಲ್ಲಿ ಮತ್ತು  ಪಿಯುಸಿಯಲ್ಲಿ ವಿಜ್ಞಾನ ವಿಷಯ ಕಲಿತು ಸದ್ಯ ಅತ್ಯುನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗಣ್ಯರು ಮಾರ್ಗದರ್ಶನ ನೀಡುವರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top