ಮಂಗಳೂರು: ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಐಎಂಎಎ ಮುಕ್ತ ಅಂತಾರಾಷ್ಟ್ರೀಯ ಟೇಕ್ವಾಂಡೊ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಚಿನ್ನದ ಪದಕ ಗಳಿಸಿದ್ದಾರೆ.
46 ಕಿಲೊ ವಿಭಾಗದಲ್ಲಿ ಸ್ಪರ್ಧಿಸಿದ್ದು, ಇವರು ತಲಪಾಡಿ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ. ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಮತ್ತು ದೀಪಾ ಕೆ.ಎಸ್. ದಂಪತಿ ಪುತ್ರಿ.
ಏ.7ರಿಂದ 9ರವರೆಗೆ ಕಠ್ಮಂಡುವಿನ ದಶರಥ ನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ಟೇಕ್ವಾಂಡೊ ಸಂಸ್ಥೆಯ ಸದಸ್ಯ ಡಾ.ಗುರುರಾಜ್ ಇಟಗಿ, ಕಾರ್ಯದರ್ಶಿ ಅನಿಲ್ ಕುಮಾರ್ ಮಾರ್ಗದರ್ಶಕರಾಗಿ ಭಾಗವಹಿಸಿದ್ದರು.
ಸಂಹಿತಾ ಅವರ ತಾಯಿ ದೀಪಾ ಕೆ.ಎಸ್. ಮತ್ತು ಸಹೋದರ ಋತ್ವಿಕ್ ಅಲೆವೂರಾಯ ಅವರು ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಕೂಟದಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ