ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಮುಖ್ಯ ಅತಿಥಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಉಷಾ ಕೆ. ಎಮ್, “ನಾನು ಮಗಳೊಬ್ಬಳ ಹೆಮ್ಮೆಯ ತಾಯಿ” ಎಂದು ಹೆಣ್ತನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ದೇವಾಡಿಗ ಅವರು ಸಮಾಜದಲ್ಲಿ ಮಹಿಳೆಯರ ಮಹತ್ವವವನ್ನು ತಿಳಿಸಿಕೊಟ್ಟರು. ಸಹಪ್ರಾಧ್ಯಾಪಕ ಡಾ.ಸಿದ್ದರಾಜು ಎಂ.ಎನ್, “Men Are from Mars,Women Are from Venus” ಪುಸ್ತಕವನ್ನು ಉಲ್ಲೇಖಿಸಿ, ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಪ್ರಬಲರು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಜಗತ್ತಿನೆಲ್ಲೆಡೆ ವಿವಿಧ ವಿಭಾಗಗಳಲ್ಲಿ ಮಹತ್ಸಾಧನೆ ಮಾಡಿದ ಮಹಿಳೆಯರ ಪರಿಚಯ ಮಾಡಿ, ಅವರ ಸಾಧನೆಗಳ ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿನಿ ವೇದಾಶಿಣಿ, 'ಫೋರ್ಬ್ಸ್' ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 54 ನೇ ಸ್ಥಾನವನ್ನು ಪಡೆದ ಮತ್ತು 2019 ರಲ್ಲಿ ಭಾರತದ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದ ಹೆಚ್. ಸಿ. ಎಲ್ ಸಿಇಓ ರೋಶನಿ ನಾಡರ್ ಬಗ್ಗೆ ಪ್ರಸ್ತಾಪಿಸಿದರು.
ಉಪನ್ಯಾಸಕಿ ಕಾವ್ಯ, ಸಂಶೋಧನಾರ್ಥಿ ಪರಮಶ್ರೀದೀಪ, ಬೋಧಕೇತರ ಸಿಬ್ಬಂದಿ ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು. ಬಿ.ಎಸ್ಸಿ ವಿದ್ಯಾರ್ಥಿಗಳಾದ ಪ್ರಗತಿ ಮತ್ತು ಪ್ರಜ್ಞಾ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸಿದರು. ಮಹಿಳಾ ದಿನಾಚರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶ್ರಾವ್ಯ (3ನೇ ಬಿ.ಎಸ್ಸಿ), ಕವಿತಾ (3ನೇ ಬಿ.ಎಸ್ಸಿ), ದೀಕ್ಷಾ ಭಟ್ (2ನೇ ಬಿ.ಎಸ್ಸಿ) ಮತ್ತು ಸೃಜನ್ (1ನೇ ಬಿ.ಎಸ್ಸಿ) ಅವರಿಗೆ ಬಹುಮಾನ ವಿತರಿಸಲಾಯಿತು.
ಪ್ರಗತಿ ಮತ್ತು ಮಲ್ಲೇಶ್ವರಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶರಣ್ಯ ಪೂಜಾರಿ ಸ್ವಾಗತ ಕೋರಿದರು. ಪ್ರಗತಿಯವರ ವಂದನಾರ್ಪಣೆಯಿತ್ತು. ಕಾರ್ಯಕ್ರಮ ನಿರೂಪಿಸಿದ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಫಾತಿಮಾ ಫರಾಸತ್ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ