|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಿ ಕಾಶ್ಮೀರ್‌ ಫೈಲ್: ಪ್ರತಿಯೊಬ್ಬ ದೇಶಭಕ್ತನೂ ನೋಡಲೇಬೇಕಾದ ಸಿನಿಮಾ

ದಿ ಕಾಶ್ಮೀರ್‌ ಫೈಲ್: ಪ್ರತಿಯೊಬ್ಬ ದೇಶಭಕ್ತನೂ ನೋಡಲೇಬೇಕಾದ ಸಿನಿಮಾ


ಅರವತ್ತರಲ್ಲಿ ಅರಳು ಮರುಳು. ಇದು ಗಾದೆ ಮಾತಿರಬಹುದು. ಯಾಕೆಂದರೆ ನಾನು ಇದುವರೆಗೂ ಸಿನೆಮಾ ನೋಡಲೆಂದೇ ಮಂಗಳೂರಿಗೆ ಹೋದದ್ದಿಲ್ಲ. ಆದರೆ ಮಂಗಳೂರಿಗೆ ಹೋದಾಗ ಸಿನೆಮಾ ನೋಡಿದ್ದುಂಟು, ಸಿನೆಮಾ ನೋಡಲೆಂದೇ ಉಳಕೊಂಡದ್ದೂ ಉಂಟು. ಅದ್ಯಾಕೋ ಇಂದು ನನ್ನಂತೆ ಅರಳು ಮರುಳಿಗೆ ಹತ್ತಿರ ಹತ್ತಿರ ಬಂದಂಥ ನನ್ನ ಭಾವ ಸುರೇಶ ಗೋಖಲೆಯವರ ಜತೆ ಕಾಶ್ಮೀರಿ ಫೈಲ್ ಸಿನೆಮಾಕ್ಕೆ ಇಂದು ಹೋಗಿ ಬಂದೆವು. ಅರಳು ಮರುಳಾದರೂ ನೋಡಿದ ಸಿನೆಮಾದಲ್ಲಿ ಬಲವಾದ ತಿರುಳಿದ್ದದ್ದಂತೂ ಸತ್ಯ. ಅದು ಏನು ಸತ್ಯ? ನೋಡೋಣ...


ಇದು ಸಿನೆಮಾ ಎಂದರೆ ಸಿನೆಮಾ. ನಟನೆ ಎಂದರೆ ನಟನೆ. ಸತ್ಯ ಘಟನೆ ಎಂದರೆ ಸತ್ಯ ಘಟನೆ. ಅವರವರ ಭಾವಕ್ಕೆ ಅಭಾವವಿಲ್ಲ. ಆದರೆ ಮನೋರಂಜನೆಯಲ್ಲ. ಪ್ರತಿಯೊಬ್ಬ ದೇಶ ಭಕ್ತನೂ ನೋಡಲೇ ಬೇಕಾದ ಸಿನೆಮಾ ಎಂದರೂ ಅತಿಶಯೋಕ್ತಿ ಆಗಲಾರದು. ಇಲ್ಲಿ ಸಿನೆಮಾದ ಕಥೆಯನ್ನು ಹೇಳಬಾರದು ಅದನ್ನು ಸ್ವತಹ ನೋಡಿಯೇ ತಿಳಿದು ಕೊಳ್ಳಬೇಕು. ಆದರೆ ಅಭಿಪ್ರಾಯ ಮಂಡಿಸಬಹುದು. ಮೊದಲನೆಯದಾಗಿ ಹೇಳುವುದಾದರೆ ಇದು ಮೂವತ್ತು ವರ್ಷಕ್ಕೂ ಹಿಂದೆ ಕಾಶ್ಮೀರದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ. ಹಾಗೆಂದು ಅದು ಅಂದು ಮಾತ್ರ ನಡೆದ ಘಟನೆಯಂತೂ ಅಲ್ಲ. ಸ್ವಾತಂತ್ರ್ಯ ಪೂರ್ವದಿಂದಲೇ ಇದಕ್ಕೆ ತಯಾರಿ ನಡೆದಿದೆ ಮಾತ್ರವಲ್ಲ ಈಗಲೂ ಪ್ರಸ್ತುತವೇ ಆಗಿರುವುದೂ ಸತ್ಯವೇ. ಮುಂದೊಂದು ದಿನ ಭಾರತದ ಯಾವ ಮೂಲೆಯಲ್ಲೂ ಇದರ ಪುನರಾವರ್ತನೆಯೂ ಆಗಬಹುದು. ಆದರೆ ಹಾಗಾಗದಿರಲಿ ಎಂದು ಆಶಿಸೋಣ. ವೈಯುಕ್ತಿಕವಾಗಿ ನೋಡುವುದಾದರೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಇವರ ಅಭಿನಯ ಸದಾ ಕಾಡುತ್ತಿರುತ್ತದೆ.  


ಸಿನೆಮಾ ಮಾಡುವ ಅರ್ಹತೆ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಇರುವಂತೆ ಸಿನೆಮಾ ನೋಡುವ ಅರಹತೆಯೂ ನೋಡುಗನಿಗೆ ಇರಬೇಕು. ಮೊದಲಾಗಿ ಸತ್ಯವನ್ನು ಅರಗಿಸಿಕೊಳ್ಳುವ ಮನೋಧರ್ಮ ಬೇಕು. ಪೂರ್ವಾಗ್ರಹ ಬಿಡಬೇಕು. ಇದನ್ನು ನೋಡುವವರು ಒಂದು ಪಕ್ಷ, ನೋಡದವರು ಇನ್ನೊಂದು ಪಕ್ಷವೆಂಬುದು ಇರಬಾರದು. ಯಾಕೆಂದರೆ ಇದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ,  ಬದಲಾಗಿ ಮಾನವೀಯತೆಗೆ ಸಂಬಂಧಿಸಿದ್ದು. ಮನುಷ್ಯತ್ವಕ್ಕೇ ಅಪಮಾನ ಮಾಡುವಂಥ ಅಂದಿನ ಆ ದರ್ಘಟನೆಗಳಿಗೆ ಮಾನವ ಧರ್ಮ ಬಲ್ಲವರು ಯಾರೂ ಬೆಂಬಲಿಸಲಾರರು, ಬೆಂಬಲಿಸಲೂ ಬಾರದು.

ಇನ್ನು ಕೆಲವರ ವಾದದಂತೆ ಇಂಥ ಸಿನೆಮಾಗಳು ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುತ್ತವೆ ಎಂದು. ಇದರಲ್ಲಿ ಕೊಂಚವೂ ತಿರುಳಿಲ್ಲ. ಯಾಕೆಂದರೆ ದಿ ಕಾಶ್ಮೀರ್ ಫೈಲ್ ಎಂಬ ಸಿನೆಮಾ ಬಿಡುಗಡೆಗೆ ಮುನ್ನ ಸಾವಿರಾರು ಕೋಮು ಗಲಭೆಗಳಾಗಿವೆ. ಕೊನೆ ಪಕ್ಷ ಇಂಥ ಸಿನೆಮಾದಿಂದ ಜನರು ಪಾಠ ಕಲಿಯಬಹುದು. ಮುಂದೆ ಕೋಮು ಗಲಭೆಗಳಾಗದಂತೆ ಎಚ್ಚರಿಕೆ ವಹಿಸಬಹುದು. ಹಾಗೆಂದು ಹಿಂದೆ ನಡೆದ ಘಟನೆಗಳಿಗೆ ಇಂದು ಪ್ರತೀಕಾರ ತೆಗೆದು ಕೊಳ್ಳುವಷ್ಟು ಜನರು ಅಪ್ರಬುದ್ಧರೂ ಅಲ್ಲ. ಸೌಹಾರ್ದ ಬಾಳ್ವೆಯನ್ನೇ ಎಲ್ಲರೂ ಬಯಸುವುದು. ಆದರೂ ನಾವು ಜಾಗೃತವಾಗಿರಬೇಕೆಂಬ ಸಂದೇಶ ಮಾತ್ರ ಈ ಸಿನೆಮಾದಲ್ಲಿ ಅಡಗಿದೆ. ಚರಿತ್ರೆಯಿಂದ ಪಾಠ ಕಲಿಯಬೇಕಾದರೆ ಚರಿತ್ರೆಯಲ್ಲಿ ಪಾರದರ್ಶಕತೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಪಾಠ ನಮಗೆ ಕಾಶ್ಮೀರಿ ಫೈಲ್ ನಲ್ಲಿದೆ. ಈ ಚಿತ್ರವನ್ನು ನೋಡಿದ ಮೇಲೆ ನಾವು ಕೊಂಚವಾದರೂ ಸತ್ಯವನ್ನು ತಿಳಿದು ಕೊಂಡೆವೆಂಬ ಅಭಿಪ್ರಾಯ ಬಂದರೆ, ನಮ್ಮ ಮನೋಧರ್ಮವನ್ನು ತಿದ್ದಿಕೊಂಡರೆ, ರಾಕ್ಷಸೀ ಪ್ರವೃತ್ತಿಯ ಬಗ್ಗೆ ಜಾಗೃತರಾದರೆ ಕೃತಾರ್ಥರಾದಂತೆ.  ಧನ್ಯವಾದಗಳು ಅಗ್ನಿಹೋತ್ರಿಯವರೇ. 

-ಬಾಲಕೃಷ್ಣ ಸಹಸಬುದ್ಧೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post