||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುದರ್ಶನ ಮಾಸಪತ್ರಿಕೆ ಲೋಕಾರ್ಪಣೆ

ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುದರ್ಶನ ಮಾಸಪತ್ರಿಕೆ ಲೋಕಾರ್ಪಣೆ

ಬರವಣಿಗೆ ಓದುಗರಲ್ಲಿ ಪ್ರೇರಣೆಯ ಬೆಳಕನ್ನು ಹರಿಸಬೇಕು: ದು.ಗು.ಲಕ್ಷ್ಮಣ


ಪುತ್ತೂರು: ಯಾವುದೇ ಬರವಣಿಗೆಯು ಜನರ ಮನಸ್ಸನ್ನು ಅರಳಿಸುವಂತಿರಬೇಕೇ ವಿನಃ ಕೆರಳಿಸುವಂತಿರಬಾರದು. ಬರಹಗಳು ಭಾಷಾ ಶುಧ್ಧತೆ, ಆಸಕ್ತಿದಾಯಕ ವಿಷಯ, ಸಕಾರಾತ್ಮಕ ಅಂಶಗಳನ್ನು ಹೊಂದಿರಬೇಕು. ಅಂತೆಯೇ ವ್ಯಕ್ತಿಯ ಬದುಕಿಗೆ ಪ್ರೇರಣೆಯ ಬೆಳಕನ್ನು ಸೂಸುವಂತಿರಬೇಕು. ಇದಕ್ಕೆ ಹೊರತಾದ ಬರವಣಿಗೆ ಮಾದರಿ ಎನಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಂತಹ ಆದರ್ಶಗಳೊಂದಿಗೆ ಡಿವಿಜಿ, ತೀ.ತಾ.ಶರ್ಮ, ಮೊಹರೆ ಹನಮಂತರಾಯರೇ ಮೊದಲಾದವರು ಕಾರ್ಯನಿರ್ವಹಿಸಿ ಕನ್ನಡ ಪತ್ರಿಕೋದ್ಯಮವನ್ನು ರ್ಶರೀಮಂತಗೊಳಿಸಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರದಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಕಾಶನದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ರೂಪಿಸುತ್ತಿರುವ ಸುದರ್ಶನ ಮಾಸ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.


ಹಿಂದಿನ ಪತ್ರಿಕೋದ್ಯಮ ಮತ್ತು ಇಂದಿನ ಪತ್ರಿಕೋದ್ಯಮಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಇಂದು ತಂತ್ರಜ್ಞಾನದ ಸಹಾಯದೊಂದಿಗೆ ಪತ್ರಿಕೋದ್ಯಮವು ಶರವೇಗದಲ್ಲಿ ಮುಂದುವರೆಯುತ್ತಿದೆ. ಆದರೆ ಕೆಲವು ಪತ್ರಿಕೆಗಳು ಪತ್ರಿಕೋದ್ಯಮದ ಮೂಲ ಉದ್ದೇಶವನ್ನು ಮರೆತು ಪರಿಧಿಯಾಚೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಪತ್ರಿಕೆಗಳು ವಸ್ತು ನಿಷ್ಠ, ಪ್ರಖರ ವಿವರಗಳಿಗೆ ಹಾಗೂ ಧನಾತ್ಮಕ ವರದಿಗಳಿಗೆ ಕನ್ನಡಿ ಹಿಡಿಯುವಂತಾಗಬೇಕು. ಆತ್ಮಸಾಕ್ಷಿ, ನಿಯತ್ತು ಮುಂತಾದ ಗುಣಗಳನ್ನು ಉಳಿಸಿಕೊಂಡು ಪತ್ರಕರ್ತನು ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಇದೆ ಎಂದರು.


ಪುತ್ತೂರು ತಾಲೂಕು ಪತ್ರಕರ್ತ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಪತ್ರಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವನ್ನು ಕಾಲೇಜಿನ ಪತ್ರಿಕೆಗಳು ಮೂಡಿಸುತ್ತವೆ. ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಅಂಬಿಕಾ ಸಂಸ್ಥೆ ಉತ್ತಮ ಅಡಿಪಾಯವನ್ನು ಹಾಕಿ ಕೊಟ್ಟಿದೆ. ಪ್ರಾಯೋಗಿಕ ಜ್ಞಾನವಿಲ್ಲದೆ ಖೇವಲ ಪಠ್ಯದ ಮಾಹಿತಿಯೊಂದಿಗೆ ಪತ್ರಿಕಾಲಯಗಳಿಗೆ ಅಡಿಯಿಟ್ಟರೆ ಪತ್ರಕರ್ತನಾಗಿ ಕೆಲಸ ನಿರ್ವಹಿಸುವುದಕ್ಕೆ ಸಾಧ್ಯವಿಲ್ಲ ಎಂದರು.


ಇತ್ತೀಚೆಗೆ ಪತ್ರಕರ್ತರು ರಾಷ್ಟ್ರೀಯ ಚಿಂತನೆಯಿಂದ ವಿಮುಕ್ತರಾಗುತ್ತಿದ್ದಾರೆ. ರಾಷ್ಟ್ರದ ಅಭ್ಯುದಯಕ್ಕಾಗಿ ಶ್ರಮಿಸುವ ಪತ್ರಕರ್ತರ ಅವಶ್ಯಕತೆ ಇದೆ. ಅದನ್ನು ಮನಗಂಡು ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಅಧಿಕಾರಿ ವರ್ಗದಂತೆ ಪತ್ರಕರ್ತರೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡಲು ಸಾಧ್ಯ ಎನ್ನುವುದನ್ನು ಪತ್ರಕರ್ತರು ಸಾಧಿಸಿ ತೋರಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಅಭಿಮಾನವನ್ನು ಬೆಳೆಸಿ ರಾಷ್ಟ್ರಕ್ಕೋಸ್ಕರ ಸಮಿಧೆಯಂತೆ ಉರಿಯುವುದಕ್ಕೆ ಸಿದ್ಧರಿರಬೇಕು. ಭಗತ್ ಸಿಂಗ್, ಸರದಾರ ವಲ್ಲಭಭಾಯಿ ಪಟೇಲ್ ಮುಂತಾದವರನ್ನು ಆದರ್ಶವಾಗಿರಿಸಿಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಹಿತಕ್ಕಾಗಿ ದುಡಿಯಬೇಕು. ಸುದರ್ಶನ ಮಾಸಪತ್ರಿಕೆಯನ್ನು ತಮ್ಮ ರಾಷ್ಟ್ರ ಚಿಂತನೆಯನ್ನು ಹರಿಸುವ ವೇದಿಕೆಯನ್ನಾಗಿ ವಿದ್ಯಾರ್ಥಿಗಳು ಪರಿವರ್ತಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಐಕ್ಯೂಎಸಿ ಘಟಕದ ಸಂಯೋಜನಾಧಿಕಾರಿ ಚಂದ್ರಕಾಂತ್ ಗೋರೆ ವಂದಿಸಿ, ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥ ತೇಜಶಂಕರ ಸೋಮಯಾಜಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post