ಉಜಿರೆ: "ಆಧುನಿಕ ಯುಗದಲ್ಲಿ ನಾವು ಯಾವುದೇ ಕ್ಷೇತ್ರದಲ್ಲಿ ಪ್ರವೇಶಿಸಿದರೂ ಅಂಕಗಳ ಜೊತೆಗೆ ನಮಗೆ ಸಾಕಷ್ಟು ಕೌಶಲ್ಯಗಳು ಕೂಡ ಅನಿವಾರ್ಯ, ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಅವರ ಪಠ್ಯ, ಅಂಕಗಳಿಗಿಂತ ಹೆಚ್ಚು" ಎಂದು ಶ್ರೀ ಧ.ಮ. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಶಾಂತಿ ಪ್ರಕಾಶ್ ಹೇಳಿದರು.
ಉಜಿರೆಯ ಶ್ರೀ.ಧ.ಮ. ಕಾಲೇಜಿನ ಭೌತಶಾಸ್ತ್ರ ವಿಭಾಗವು Design and Calibration of digital panel ಎಂಬ ವಿಷಯದ ಮೇಲೆ ನಡೆದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
40 ವರ್ಷಗಳ ಹಿಂದೆ ನಾನು ಬಿ.ಎಸ್ಸಿ. ಓದುತ್ತಿದ್ದಾಗ ಶೇ. 60 ಪಡೆಯುವುದೇ ಒಂದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗುತ್ತಿತ್ತು ಹಾಗು ಶೇ 80 ತೆಗೆದರೆ ಶ್ರೇಣಿಯ ವಿಧ್ಯಾರ್ಥಿ ಎಂದು ಪರಿಗಣಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಶೇ 90 ತೆಗದರೂ ಸಾಕಾಗುವುದಿಲ್ಲ, ಅದರ ಜೊತೆಗೆ ಕೌಶಲ್ಯಗಳು ಕೂಡ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ, ಎಲ್ಲ ಕ್ಷೇತ್ರಗಳಿಗೆ ಕೌಶಲ್ಯಗಳ ಅನಿವಾರ್ಯವಿದೆ ಎಂದು ವಿಶ್ಲೇಷಿಸಿದರು.
ಉತ್ಪಾದಕರಿಗೆ ತಾರ್ಕಿಕ ಕೌಶಲ್ಯಗಳು, ಉದ್ಯಮಿಗೆ ವ್ಯಾಪಾರದ ಕೌಶಲ್ಯ ಮತ್ತು ಸಂಶೋಧಕರಿಗೆ ವಿಶ್ಲೇಷಣಾತ್ಮಕ ಕೌಶಲ್ಯಗಳ ಅಗತ್ಯವಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕೌಶಲ್ಯಗಳ ಅಳವಡಿಕೆ ಮುಖ್ಯವೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಚಂದ್ರ ಪಿ ಎನ್ ಮಾತನಾಡಿ "ವಿದ್ಯಾರ್ಥಿಗಳಲ್ಲಿ ಕೌಶಲ್ಯದ ನೈಪುಣ್ಯತೆ ತುಂಬಾ ಅಗತ್ಯ ಎಂದು ಪ್ರತಿಪಾದಿಸಿದರು ಹಾಗೂ ಆಯೋಜಕರನ್ನು ಅಭಿನಂದಿಸಿದರು.
ವಿಭಾಗವು ಏರ್ಪಡಿಸಿದ್ದ ಈ - ಮ್ಯಾಗಜೀನ್ ರೂಪುರೇಷೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು. ಪೃಥ್ವಿರಾಜ್ ಮತ್ತು ಸ್ಮಿತಾ ಮೊದಲನೇ ಬಹುಮಾನ, ವಿಶಾಲ್ ಮತ್ತು ಅಮೃತ್ ಎರಡನೇ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಅಲ್ಲೂರ ಸಂಸ್ಥೆಯ ಮಾಲೀಕ ಸಂತೋಷ್ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಕಾಕತ್ಕರ್, ಕನ್ನಡ ವಿಭಾಗ ಮುಖ್ಯಸ್ಥ ಡಾ. ಸಂಪತ್ ಕುಮಾರ್ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಅಪೇಕ್ಷಾ ಸ್ವಾಗತ ಭಾಷಣ ಮಾಡಿದರು, ಅಂತಿಮ ವರ್ಷದ ವಿದ್ಯಾರ್ಥಿನಿ ವಾಸವಿ ಧನ್ಯವಾದಗಳನ್ನು ಅರ್ಪಿಸಿದಳು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ