|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಮಾತಿನಲ್ಲೇ ನಗಿಸುವ ನಟ, ನಿರೂಪಕ ಅಕ್ಷಯ್ ವಾಮಂಜೂರ್

ಪರಿಚಯ: ಮಾತಿನಲ್ಲೇ ನಗಿಸುವ ನಟ, ನಿರೂಪಕ ಅಕ್ಷಯ್ ವಾಮಂಜೂರ್


ಜೀವನದಲ್ಲಿ ಮುಂದೆ ಬರಬೇಕಾದರೆ ಅದೆಷ್ಟೋ ಅಡಚಣೆಗಳು ಬರುತ್ತದೆ. ಆದರೆ ನಮ್ಮ ಜೀವನದ ಹಾದಿಯನ್ನು ಮುನ್ನಡೆದು ಗೆಲ್ಲಬೇಕಾಗುತ್ತದೆ. ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ, ನಮ್ಮ ಪಯಣವನ್ನು ಶುರುಮಾಡಬೇಕು. ತನ್ನ ಕನಸುಗಳತ್ತ ನಡೆಯಬೇಕು ತನ್ನ ಜೀವನದ ಗುರಿಯನ್ನು ತಲುಪಬೇಕು ಎಂದು ಪ್ರಯತ್ನ ಪಡುತ್ತಿರುವ ಅಕ್ಷಯ್ ವಾಮಂಜೂರು.


ಸಣ್ಣ ವಯಸ್ಸಿನಲ್ಲೇ ಮೈಕ್ ಹಿಡಿದು ವೇದಿಕೆಗಳತ್ತ ಕಾಲಿಟ್ಟವರು. ಸಣ್ಣ ವಯಸ್ಸಿನಲ್ಲೇ ಅಷ್ಟೆಲ್ಲ ಸಾಮರ್ಥ್ಯ ಇರಬೇಕಾದರೆ ಇಂದು ತನಗೆ ಒಂದೊಳ್ಳೆ ವೇದಿಕೆಗಳಲ್ಲಿ ಅವಕಾಶಗಳು ಒದಗಿ ಬರುತ್ತದೆ, ಎಂದು ಇಂದು ಕೂಡ ಹಲವಾರು ವೇದಿಕೆಗಳಲ್ಲಿ ಮೈಕ್ ಹಿಡಿದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಇವರು ಮಂಗಳೂರಿನ ತಿರುವೈಲ್ ಗ್ರಾಮದ ವಾಮಂಜೂರಿನ ನವೀನ್ ಕುಮಾರ್ ಹಾಗೂ ಸುಜಾತಾ ದಂಪತಿಗಳ ಪುತ್ರ ಅಕ್ಷಯ್. ಛಲ ಎನ್ನುವುದು ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ. ಸಿಟಿ ಗೈಸ್ ಗುರುಪುರ ಇಲ್ಲಿ ನೃತ್ಯಗಳನ್ನು ಕರಗತ ಮಾಡಿಕೊಂಡರು. ಪ್ರಣವಂ ಸಿಂಗಾರಿ ಮೇಳ ಇದರಲ್ಲಿ ಚೆಂಡೆಯಲ್ಲೂ ತೊಡಗಿಕೊಂಡರು. ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಇವರು ನಟನೆ ನಿರೂಪಣೆಗಳಲ್ಲೂ  ಭೇಷ್ ಎನಿಸಿಕೊಂಡಿದ್ದಾರೆ. ಎಲ್ಲರ ಜೊತೆಗೆ ಮುಗ್ದ ಮಾತುಗಳ ಜೊತೆಗೆ ನಗಿಸುತ್ತಾ ಉತ್ತಮ ಹೊಂದಾಣಿಕೆ ಬೆಳೆಸಿಕೊಂಡಿದ್ದಾರೆ. ಎಲ್ಲರ ಜೊತೆಗೂ ಆತ್ಮೀಯರಾಗಿ ಮಾತನಾಡುವ ಇವರು 10ನೇ ತರಗತಿಯಲ್ಲಿ ಇರುವಾಗಲೇ ಮದುವೆ, ಹುಟ್ಟುಹಬ್ಬ ಮೊದಲಾದ ಕಾರ್ಯಕ್ರಮಗಳಲ್ಲಿ ಮನೋರಂಜನೆ ನಿರೂಪಣೆ ಮಾಡಿ ಈಗಲೂ ಮುಂದುವರಿಸುತ್ತಿದ್ದಾರೆ. ಅದಲ್ಲದೆ ಕೊರೊನ ಸಂಧರ್ಭದಲ್ಲಿ ರಜೆಗಳು ಇದ್ದ ಕಾರಣ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನಲ್ಲಿ ನೇರ ಪ್ರಸಾರ ಕಾರ್ಯಕ್ರಮ ಮಾಡಿ ಪ್ರತಿಭೆಯ ಸಾಧಕರನ್ನು ಪರಿಚಯಿಸಿ ಅದ್ಬುತ ಕಾರ್ಯಕ್ರಮ ಮಾಡಿದ್ದಾರೆ. ನೂರಕ್ಕೂ ಅಧಿಕ ನಿರೂಪಣೆ ಕಾರ್ಯಕ್ರಮ ಮಾಡಿದ್ದಾರೆ.


ನಟನೆ ಕ್ಷೇತ್ರದಲ್ಲೂ ಮುಂದುವರಿಯಬೇಕೆಂದು ನಾಟಕ ತಂಡಗಳಲ್ಲೂ ಸೇರಿ ಶಕ್ತಿ ನಗರದಲ್ಲಿ 'ಟ್ರೈನ್ ಟು ಪಾಕಿಸ್ತಾನ', ಮತ್ತು ಮುಂಬೈಯಲ್ಲಿ 'ಮಹಾಭಾರತ' ನಾಟಕ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ.  ಸಿನೆಮಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡವರು. 'ಲುಂಗಿ' ಕನ್ನಡ ಸಿನೆಮಾ, 'ಪಮ್ಮನ್ನ ದಿ ಗ್ರೇಟ್','ಏರಾ ವುಲ್ಲೆರ್ ಗೆ' ತುಳು ಸಿನೆಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ನಟನೆ ಜೊತೆಗೆ ಚಿತ್ರಕಥೆ, ನಿರ್ದೇಶನ ಕೂಡ ಮಾಡುತ್ತಾರೆ.  'ಆಸೆದ ಕಡಲ್' ಎಂಬ ಆಲ್ಬಮ್ ಸಾಂಗ್ ನಲ್ಲಿ ಹೀರೋ ಆಗಿ ನಟನೆ ಮಾಡಿ, ನಿರ್ದೇಶನ, ಕತೆ ಎಲ್ಲಾ ಮಾಡಿದ್ದಾರೆ. 'ಮನಸ್' ಆಲ್ಬಮ್ ಸಾಂಗ್ ನಲ್ಲಿ ಹೀರೋ ಮತ್ತು ಜನರ ಮೆಚ್ಚುಗೆಗೆ ಪತ್ರವಾಗಿತ್ತು ಈ ಸಾಂಗ್. 'ಕನಸ ಯುವರಾಣಿ', 'ಪೊರ್ಲ ಮುತ್ತು' ನಲ್ಲಿ ಹೀರೋ ಪಾತ್ರ ಮತ್ತು 'ಬಬ್ಬು ಸ್ವಾಮಿ ' ಭಕ್ತಿಗೀತೆಯ ನಿರ್ದೇಶನ ಹಾಗೂ 'ಅಮ್ಮ' ಎಂಬ ಕಿರು ಚಿತ್ರ ಬಿಡುಗಡೆ ಹಂತದಲ್ಲಿದೆ. ಕಾಮಿಡಿ ಶೋ ಗಳನ್ನು ಮಾಡುತ್ತಾರೆ. ಇವರಿಗೆ ತನ್ನದೇ ಒಂದು ಯು ಟ್ಯೂಬ್ ಚಾನೆಲ್ ಮಾಡಬೇಕು, ಕಟೀಲ್ ಕ್ಷೇತ್ರದಲ್ಲಿ ಒಂದು ತಂಡ ಮಾಡಬೇಕು, ಎಂದು ಕಟೀಲ್ ನ ಅಮ್ಮನ ಸನ್ನಿದಿಯಲ್ಲಿ 'ಅಮ್ಮ ಕ್ರಿಯೇಷನ್' ಎಂಬ ಯು ಟ್ಯೂಬ್ ಚಾನೆಲ್ ಮಾಡಿದ್ರು, ಇದರಲ್ಲಿ ಮೊದಲಿಗೆ ಮನಸ್ ಆಲ್ಬಮ್ ಸಾಂಗ್ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.


ತಂದೆ ತಾಯಿಯ ಮತ್ತು ಫ್ರೆಂಡ್ಸ್ ಎಲ್ಲರ ಪ್ರೋತ್ಸಾಹ, ಬೆಂಬಲ ಕೂಡ ಜೀವನದ ಹಾದಿಗೆ ಸಹಾಯವಾಗಿದೆ ಎಂದು ಹೇಳಿದರು. ಪ್ರಸ್ತುತ ಇವರು ಮಂಗಳೂರಿನ ಮ್ಯಾಕ್ಸ್ ಫ್ಯಾಷನ್ ಇಂಟರ್ ನ್ಯಾಷನಲ್ ಖಾಸಗಿ ರಿಟೇಲ್ ಶಾಪ್ ನಲ್ಲಿ ಸೀನಿಯರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನದ ಹಾದಿ ಉತ್ತಮ ರೀತಿಯಲ್ಲಿ ಮುಂದುವರಿಯಲಿ.

-ರಸಿಕಾ ಮುರುಳ್ಯ

ತೃತೀಯ ಪತ್ರಿಕೋದ್ಯಮ,

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post