|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾ.19: ಮಂಗಳೂರು ವಿವಿಯಲ್ಲಿ ಪ್ರೊ. ಪ್ರಕಾಶ್ ಪಿ. ಕಾರಾಟ್ ದತ್ತಿನಿಧಿ ಉಪನ್ಯಾಸ

ಮಾ.19: ಮಂಗಳೂರು ವಿವಿಯಲ್ಲಿ ಪ್ರೊ. ಪ್ರಕಾಶ್ ಪಿ. ಕಾರಾಟ್ ದತ್ತಿನಿಧಿ ಉಪನ್ಯಾಸ

ಭಾರತೀಯ ಬಾಹ್ಯಾಕಾಶ ಯೋಜನೆಗಳು- ಪ್ರೇರಣೆಗಳು ಮತ್ತು ಅವಕಾಶಗಳು



ಮಂಗಳೂರು: ಪ್ರೊ. ಪ್ರಕಾಶ್ ಪಿ. ಕಾರಾಟ್ ದತ್ತಿನಿಧಿ ಉಪನ್ಯಾಸ ಮಾಲಿಕೆಯ ಎಂಟನೇ ಉಪನ್ಯಾಸವು ಮಂಗಳೂರು ವಿಶ್ವವಿದ್ಯಾನಿಲಯದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಮಾರ್ಚ್ 19ರಂದು ಅಪರಾಹ್ನ 2.30 ಘಂಟೆಗೆ ಜರುಗಲಿದೆ. ಈ ಬಾರಿಯ ಉಪನ್ಯಾಸವನ್ನು ಡಾ. ವಿ. ರಾಧಾಕೃಷ್ಣ, ವಿಜ್ಞಾನಿ ಯು.ಆರ್. ರಾವ್ ಉಪಗ್ರಹ ಕೇಂದ್ರ, ಭಾರತೀಯ ಬಾಹ್ಯಾಕಾಶ ಸಂಸ್ಥೆ, ಬೆಂಗಳೂರು ಇವರು ನಡೆಸಿಕೊಡಲಿರುವರು.


ಭಾರತೀಯ ಬಾಹ್ಯಾಕಾಶ ಯೋಜನೆಗಳು- ಪ್ರೇರಣೆಗಳು ಮತ್ತು ಅವಕಾಶಗಳು ಎಂಬ ವಿಚಾರದ ಮೇಲೆ ಉಪನ್ಯಾಸ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ಮುಖ್ಯಸ್ಥರಾದ ಪ್ರೊ. ಮಂಜುನಾಥ ಪಟ್ಟಾಬಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರೊ. ಪ್ರಕಾಶ್ ಪಿ. ಕಾರಾಟ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.


ಪ್ರೊ. ಪ್ರಕಾಶ್ ಪಿ. ಕಾರಾಟ್‌ ಅವರು ಸಂತ ಫಿಲೋಮಿನಾ ಕಾಲೇಜು, ಪುತ್ತೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ, ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.


ಈ ಕಾರ್ಯಕ್ರಮವನ್ನು ಪ್ರೊ. ಕಾರಾಟ್‌ ಅವರ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಮುಕ್ತ ಪ್ರವೇಶವಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post