ಕವನ: ಶಿವಶಕ್ತಿ

Upayuktha
0



ಶಿವನೆಂದರೆ,

ಕರುಣೆ - ಪ್ರೀತಿ - ಪ್ರೇಮ..

ಶಕ್ತಿಯೆಂದರೆ,

ಧೈರ್ಯ - ಅಭಯ - ಪಾಲನೆ..


ಶಿವಶಕ್ತಿಯೆಂದರೆ

ದೇಹವೆಂಬ ಢಮರುಗದಲ್ಲಿ

ಪ್ರೀತಿಯ ಅನುಷ್ಠಾನ..

ಕಾಯವೆಂಬ ತ್ರಿಶೂಲದಲ್ಲಿ 

ಧೈರ್ಯದ ಆವರಣ..


ಬುದ್ಧಿಯ ನಯನಗಳಿಗೆ 

ಅನುಭವದ ಲೇಪನ..

ಅರಿವಿನ ಆತ್ಮಶಕ್ತಿಯೊಳಗೆ 

ಅನುಭಾವದ ಸಂಚಲನ..


ಪರರ ವಶವಾಗದೆ

ತನ್ನೊಳಗೆ ನಡೆಸುವ

ಭಕ್ತಿಯ ಪ್ರಾಣಪ್ರತಿಷ್ಠೆ..

ಪಂಚಮದ ಪರಮ

ಪಾಂಡಿತ್ಯದೊಳಗೆ 

ಸದ್ದಿಲ್ಲದೇ ಸೇರುವ

ಮುಕ್ತಿಯ ಪರಾಕಾಷ್ಟೆ...


#ಆತ್ಮಸಖಿ 

(ಗೀತಾ ರಾಘವೇಂದ್ರ)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top