ಪುತ್ತೂರು:ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕರಾಟೆ ತಂಡವು ಫೆ.26ರಂದು ಮಂಗಳಗಂಗೋತ್ರಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕರಾಟೆ ಸ್ಪರ್ಧೆಯಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದೆ.
ಕಟಾ ತಂಡ ವಿಭಾಗದಲ್ಲಿ ಅಜಿತ್ (ಪ್ರ.ಬಿಕಾಂ), ಅಕ್ಷಯ್ ಕುಮಾರ್ ಡಿ. (ದ್ವಿ. ಬಿಕಾಂ), ಧನುಷ್ (ಪ್ರ. ಬಿಸಿಎ) ಚಿನ್ನದ ಪದಕ, ಕುಮಿಟೆ ತಂಡ ವಿಭಾಗದಲ್ಲಿ ಅಕ್ಷಯ್ ಕುಮಾರ್ ಡಿ. (ದ್ವಿ. ಬಿಕಾಂ), ವಿ. ಗುಣಶಕ್ತಿ (ದ್ವಿ. ಬಿಕಾಂ), ನಿಖಿಲ್ ಕೆ ಪಿ.(ತೃ. ಬಿಕಾಂ), ಅಜಿತ್ (ಪ್ರ.ಬಿಕಾಂ), ಧನುಷ್ (ಪ್ರ. ಬಿಸಿಎ), ವಿಕೇಶ್ ಪಿ. (ಪ್ರ.ಬಿಕಾಂ) ಬೆಳ್ಳಿ ಪದಕ ಹಾಗೂ ಕುಮಿಟೆ ವೈಯಕ್ತಿಕ ವಿಭಾಗದಲ್ಲಿ ಅಜಿತ್ (ಪ್ರ.ಬಿಕಾಂ) ಕಂಚಿನ ಪದಕವನ್ನು ಪಡೆದಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ