|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಕೆ.ಎನ್‌. ಶೆಟ್ಟಿ ಸಂಸ್ಮರಣಾ ಪ್ರಶಸ್ತಿ

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಕೆ.ಎನ್‌. ಶೆಟ್ಟಿ ಸಂಸ್ಮರಣಾ ಪ್ರಶಸ್ತಿ


ಮಂಗಳೂರು: ಶ್ರೀ ಪತಂಜಲಿ ಯೊಗ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ದಿ.ಕೆ.ಎನ್. ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ ಬಳ್ಳಾಲ್‌ಬಾಗ್‌ನ ಸನಾತನ ನಾಟ್ಯಾಲಯದಲ್ಲಿ ಬುಧವಾರ ಜರುಗಿತು.


ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಯೋಗ ಕ್ಷೇತ್ರಕ್ಕೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ಕೆ. ನಾರಾಯಣ ಶೆಟ್ಟಿ ಅವರನ್ನು ಸ್ಮರಿಸಿದರು.


2022ರ ಸಾಲಿನ ಕೆ.ಎನ್.ಶೆಟ್ಟಿ ಸಂಸ್ಮರಣಾ ಪ್ರಶಸ್ತಿಯನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ದೇಲಂಪಾಡಿ, ಆರೋಗ್ಯಮಯ ಜೀವನಕ್ಕೆ ಯೋಗವೊಂದೇ ಸರಳ, ಸುಲಭ ಮತ್ತು ಪ್ರಶಸ್ತ ಮಾರ್ಗ, ದಿ.ಕೆ.ಎನ್. ಶೆಟ್ಟಿಯವರು ಯೋಗ ಪ್ರಸಾರಕ್ಕೆ ತುಂಬಾ ಶ್ರಮ ಪಟ್ಟವರು. ಯಮ, ನಿಯಮಗಳನ್ನು ಪರಿ ಪಾಲಿಸಿದುದಷ್ಟೇ ಅಲ್ಲ, ಅವರು ಧ್ಯಾನದಲ್ಲಿ ನಿಸ್ಸೀಮರಾಗಿದ್ದರು ಎಂದರು.


ಈ ಸಂದರ್ಭದಲ್ಲಿ ದೇಲಂಪಾಡಿಯವರು ಧ್ಯಾನದ ಬಗ್ಗೆ ಹಲವು ಉಪಯುಕ್ತ ಮಾಹಿತಿ ನೀಡಿದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಕಾರ್ಯಗಳಲ್ಲಿ ಪದೇ ಪದೇ ಒತ್ತಡಕ್ಕೆ ಒಳಗಾಗುವವರು ಸರಳ ಧ್ಯಾನದ ಮೂಲಕ ಒತ್ತಡವನ್ನು ನಿಯಂತ್ರಿಸಬಹುದು. ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ನಿದ್ರೆ ಆಹಾರ ವಿಹಾರ ವಿಚಾರಗಳಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗುತ್ತದೆ. ಮನಸ್ಸಿನ ಆಳ ವಿಶ್ರಾಂತಿಗಾಗಿ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಸರಳ ಧ್ಯಾನ ಬಹಳಷ್ಟು ಸಹಕಾರಿಯಾಗುತ್ತದೆ. ಪತಂಜಲಿ ಋಷಿ ಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ ಧ್ಯಾನ. ಯಮ, ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ ಬಾಹ್ಯ ಅಂಗಗಳಾಗಿದೆ. ಧಾರಣ ಧ್ಯಾನ ಮತ್ತು ಸಮಾಧಿ ಆಂತರಿಕ ಅಂಗಗಳಾಗಿದೆ. ಧ್ಯಾನ ಅಭ್ಯಾಸದ ಮುಂಚೆ ಯಮ, ನಿಯಮವನ್ನು ಆಚರಿಸಿ ಆಸನಗಳ ಅಭ್ಯಾಸ ಮಾಡಿ. ಪ್ರಾಣಾಯಾಮ ಕಲಿತು ಸಾಧನೆ ಮಾಡಿ(ಕಲ್ಮಶಗಳನ್ನು ತೊಡೆದು ಹಾಕಲು) ಮತ್ತು ಪಂಚೇಂದ್ರಿಗಳ ಹತೋಟಿಸಿ ಸಾಧಿಸಿ (ಪ್ರತ್ಯಾಹಾರ) ಏಕಾಗ್ರತೆ ಸ್ಥಿರತೆ ತಂದು ಧ್ಯಾನಕ್ಕೆ ಸಾಗಬೇಕು. ನಿಗದಿತ ಸಮಯದಲ್ಲಿ ಧ್ಯಾನ ಮಾಡಲು ಪ್ರಯತ್ನಿಸಿ. ಸ್ವಚ್ಛವಾದ ಗಾಳಿ ಬೆಳಕು ಉತ್ತಮ ಪರಿಸರದಲ್ಲಿ ಧ್ಯಾನ ಮಾಡಿ. ಯಾವುದೇ ಒಂದು ದಿನವನ್ನು ಬಿಟ್ಟು ಬಿಡದಿರಲು (ಧ್ಯಾನವನ್ನು) ಪ್ರಯತ್ನಿಸಿ. ನೆಲದಲ್ಲಿ ಕುಳಿತು ಕೊಳ್ಳಲು ಕಷ್ಟವಾದರೆ ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಧ್ಯಾನ ಮಾಡಿ.


ಧ್ಯಾನದ ಉಪಯೋಗಗಳು: ಋಣಾತ್ಮಕ ಭಾವನೆಗಳಾದ ಕೋಪ, ಹೆದರಿಕೆ, ಖಿನ್ನತೆ, ಗಾಬರಿಗೊಳ್ಳುವುದು ಇವನ್ನು ದೂರ ಮಾಡುತ್ತದೆ. ಧನಾತ್ಮಕ ಭಾವನೆಗಳನ್ನು ಬೆಳೆಸಲು ಸಹಕರಿಸುತ್ತದೆ. ಧ್ಯಾನವು ಮನಸ್ಸನ್ನು ಮೌನ ಮತ್ತು ಶಾಂತವಾಗಿರಿಸುತ್ತದೆ. ಧ್ಯಾನವು ಏಕಾಗ್ರತೆ, ನೆನಪುಶಕ್ತಿ, ಸ್ಪಷ್ಟ ಚಿಂತನೆ ಮತ್ತು ಇಚ್ಚಾ ಶಕ್ತಿಗಳನ್ನು ಅಭಿವೃದ್ಧಿ ಪಡಿಸುತ್ತದೆ. ಸರಿಯಾದ ವಿಶ್ರಾಂತಿ ಕೊಟ್ಟು ದೇಹ ಮತ್ತು ಮನಸ್ಸನ್ನು ಲವಲವಿಕೆಗೊಳಿಸುತ್ತದೆ. ಬಲು ಬೇಗನೆ ಮನಸ್ಸಿಗೆ ನೆಮ್ಮದಿ, ಶಾಂತಿ, ಆಳ ವಿಶ್ರಾಂತಿ ದೊರಕುತ್ತದೆ. ಒತ್ತಡ ನಿಯಂತ್ರಣವಾಗುತ್ತದೆ. ಮನೋಬಲ, ಆತ್ಮಬಲ ಹೆಚ್ಚುವುದು. ಮನಸ್ಸು ಶುದ್ಧವಾಗಿ ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯಲು ಈ ರೀತಿಯ ಸರಳ ಧ್ಯಾನದಿಂದ ಸಾಧ್ಯವಾಗುತ್ತದೆ.


ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಏಕನಾಥ ಬಾಳಿಗಾ, ಉಪಾಧ್ಯಕ್ಷ ಯೋಗಿಶ ಶೆಟ್ಟಿ, ಕೆ.ಎನ್. ಶೆಟ್ಟಿ ಸಂಸ್ಮರಣಾ ಸಮಿತಿ ಸಂಚಾಲಕಿ ಭಾರತಿ ಶೆಟ್ಟಿ ಉಪಸ್ಥಿತರಿದ್ದರು. ರತ್ನಾವತಿ ಬೈಕಾಡಿ ಪ್ರಾರ್ಥಿಸಿದರು. ಜಯಲಕ್ಷ್ಮಿ ಸ್ವಾಗತಿಸಿದರು. ಪ್ರಭಾ ಎನ್. ವಿ. ವಂದಿಸಿದರು. ಪರಮೇಶ್ವರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم