ಆಳ್ವಾಸ್ನಲ್ಲಿ ಇಗ್ನೈತ್ರ - 2022; ವಿದ್ಯಾರ್ಥಿಗಳಿಗೆ ಐಟಿ ಕೌಶಲ್ಯಗಳ ಮಾಹಿತಿ

Upayuktha
0

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಇಗ್ನೈತ್ರ - 2022 ಕಾರ್ಯಕ್ರಮ ಶುಕ್ರವಾರ ಕುವೆಂಪು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕೋಡ್‌ಕ್ರಾಫ್ಟ್ ಟೆಕ್ನಾಲಜಿ ಸ್ಥಾಪಕ ದೀಕ್ಷಿತ್ ರೈ, ಐಟಿ ಕ್ಷೇತ್ರದಲ್ಲಿ ವೃತ್ತಿ ಜೀವನ ಕಂಡುಕೊಳ್ಳಲು ವಿದ್ಯಾರ್ಥಿ ದೆಸೆಯಿಂದಲೇ ಪರಿಶ್ರಮ ಅಗತ್ಯ. ಅದೃಷ್ಟದಿಂದ ದೊರಕಿದ ಸ್ಥಾನ-ಮಾನದಲ್ಲಿ ಉಳಿಯಬೇಕಾದರೆ ಸರಿಯಾದ ಕೌಶಲ್ಯಗಳ ಕಡೆಗೆ ಕೇಂದ್ರಿಕರಿಸುವುದು ಮುಖ್ಯ. ಟ್ರೆಂಡ್‌ಗಳನ್ನು ಅನುಸರಿಸುವ ಬದಲು, ಆಸಕ್ತಿಯ ವಿಷಯಗಳನ್ನು ಆಯ್ದುಕೊಳ್ಳಿ. ಜ್ಞಾನ ಸಂಪಾದಿಸುವ ಕಡೆ ಗುರಿ ಇದ್ದರೆ ಎಲ್ಲವೂ ತಮ್ಮತ್ತ ಹುಡುಕಿಕೊಂಡು ಬರುತ್ತವೆ ಎಂದರು.


ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, `ಕೇವಲ ಹಣ ತೆಗೆದುಕೊಂಡು ಪ್ರಾಜೆಕ್ಟ್ ಕೆಲಸ ಮಾಡುವುದು ಮಾತ್ರ ಮುಖ್ಯವಲ್ಲ ನಮ್ಮ ಸುತ್ತಮುತ್ತಲಿನ ಸಮಾಜದ ಸಮಸ್ಯೆಗಳಿಗೆ ನಾವು ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ ಎನ್ನುವುದರ ಬಗ್ಗೆ ಅರಿವಿರಬೇಕು. ಪ್ರಸ್ತುತ ಐಟಿಗೆ ಸುವರ್ಣ ಯುಗವಿದೆ ಹಾಗಾಗಿ ಸ್ವ ಪ್ರಯತ್ನ ಹಾಗೂ ವಿಶ್ವಾಸದಿಂದಿರುವುದು ಉತ್ತಮವೆಂದರು. ಗೂಗಲ್ ಅಸಿಸ್ಟೆಂಟ್ ಗೆ ಕಮಾಂಡ್ ನೀಡುವ ಮೂಲಕ ಐಒಟಿ ತಂತ್ರಜ್ಞಾನ ಸಹಾಯದಿಂದ ವೇದಿಕೆಯ ಎಲ್ಇಡಿ ಲೈಟ್ ಗಳನ್ನು ಬೆಳಗಿಸಿ ವಿನೂತನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗ್ಲೆವಿಟಾ ಸ್ವಾಗತಿಸಿ, ಸಾದ್ ವಂದಿಸಿದರು, ದಿವಿನ್ ಕಾರ್ಯಕ್ರಮ ನಿರೂಪಿಸಿದರು.


ದ್ವಿತೀಯ ಬಿಸಿಎ ವಿದ್ಯಾರ್ಥಿ ದೀಪಕ್ ಆರ್.ಎಂ ರಚನೆಯ, ಪರಿಸರ ಹಾಗೂ ಸಾಧಕರ ಸಂಬಂಧಿತ 200 ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ಐಒಟಿ ತಂತ್ರಜ್ಞಾನ ಸಹಾಯದಿಂದ ವಿನೂತನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top