ಬೆಂಗಳೂರು: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ "ಬಸವ ಪುರಸ್ಕಾರ"ಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.
ಪ್ರಸ್ತುತ 2021ನೇ ಸಾಲಿನ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳು 2 ಪ್ರತಿಯ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2022 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ವಿಳಾಸ:- ಅಧ್ಯಕ್ಷರು. ಶರಣಗೌಡ ಪಾಟೀಲ ಪಾಳಾ, ಶಿವಶರಣ ಸಂಕಿರಣ ಗಂಟೋಜಿ ಅಪಾರ್ಟ್ಮೆಂಟ್, 3ನೇ ಮಹಡಿ # B-1, ಖುಬಾ ಪ್ಲಾಟ್, ನ್ಯಾಯಾಲಯ ರಸ್ತೆ ಕಲಬುರಗಿ 585102
ಹೆಚ್ಚಿನ ಮಾಹಿತಿಗಾಗಿ 9731555117/9741169055
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ