ಮೂಡುಬಿದಿರೆ: ಜಾಕೆ ಪರಮೇಶ್ವರ್ ಗೌಡ ಮೆಮೊರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಪುರುಷರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ತಂಡವು ಗೆಲುವು ಸಾಧಿಸಿತು.
ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಫೈನಲ್ಸ್ ನಲ್ಲಿ, ಆಳ್ವಾಸ್ ತಂಡವು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು 5 ಅಂಕ ಹಾಗೂ ಇನ್ನಿಂಗ್ಸ್ ಗಳಿಂದ ಮಣಿಸಿ ಸತತ 16ನೇ ಬಾರಿಗೆ ಚಾಂಪಿಯನ್‌ಶಿಪ್ ಗಳಿಸಿತು. ಆಳ್ವಾಸ್‌ನ ಮಲ್ಲಿಕಾರ್ಜುನ್ ಸರ್ವೋತ್ತಮ ಆಟಗಾರನಾಗಿ, ಉಜ್ವಲ್ ಉತ್ತಮ ಹಿಡಿತಗಾರನಾಗಿ ಹಾಗೂ ವಾಮದಪದವಿನ ವರದರಾಜ್, ಉತ್ತಮ ಓಟಗಾರನಾಗಿ ಹೊರಹೊಮ್ಮಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ