||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾರ್ಚ್‌ 19-20ರಂದು ಉಜಿರೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ; ಸಾಗಿದೆ ಭರದ ಸಿದ್ಧತೆ

ಮಾರ್ಚ್‌ 19-20ರಂದು ಉಜಿರೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ; ಸಾಗಿದೆ ಭರದ ಸಿದ್ಧತೆ
ಉಜಿರೆ: ಉಜಿರೆಯಲ್ಲಿ ಮಾರ್ಚ್ 19 ಹಾಗೂ 20ರಂದು ಎರಡು ದಿನಗಳ ಕಾಲ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮೂರನೇ ರಾಜ್ಯ ಮಟ್ಟದ ಅಧಿವೇಶನ ನಡೆಯಲಿದ್ದು ಭರದ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ಜನವರಿ 8 ಮತ್ತು 9ರಂದು ನಿಗದಿಯಾಗಿದ್ದ ಈ ಸಮ್ಮೇಳನ ಕೋವಿಡ್ ನಿಯಮಾವಳಿಗಳಿಂದಾಗಿ ಮುಂದೂಡಲ್ಪಟ್ಟಿತ್ತು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಅಭಿಮಾನಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ಪರಿಕಲ್ಪನೆಯಡಿ ನಡೆಯಲಿರುವ ಈ ಸಾಹಿತ್ಯೋತ್ಸವದಲ್ಲಿ ವಿವಿಧ ಗೋಷ್ಠಿಗಳು ಕವಿ ಸಮ್ಮೇಳನ, ಪುಸ್ತಕ ಪ್ರದರ್ಶನ ಮಾರಾಟ, ವಸ್ತು ಪ್ರದರ್ಶನ ಮಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ನಡೆಯಲಿದೆ.

ಜನವರಿ 19ರಂದು ಬೆಳಿಗ್ಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧಿವೇಶನವನ್ನು ಉದ್ಘಾಟಿಸಲಿದ್ದು, ಸಾಹಿತಿ ಡಾ.ನಾ ಮೊಗಸಾಲೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.

ವಸ್ತು ಪ್ರದರ್ಶನವನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಜಿಲ್ಲಾ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಪರಾಹ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ್ಯದರ್ಶಿ ಕ.ವೆಂ.ನಾಗರಾಜ ಪುಸ್ತಕ ಪ್ರಕಟಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಸಮ್ಮೇಳನದ ಕುರಿತು ಪರಿಚಯ ಮಾಡಲಿದ್ದಾರೆ.  ರಾಜ್ಯಾಧ್ಯಕ್ಷ ಪ್ರೊ.ಪ್ರೇಮ ಶಂಕರ ಸಮ್ಮೇಳನದ ಕುರಿತು ಅವಲೋಕನ ಮಾತುಗಳನ್ನಾಡಲಿದ್ದಾರೆ.

ಸಂಜೆಯ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಪರಿಚಾರಕ ಹರ್ಷವರ್ಧನ ಶೀಲವಂತ ಸಾಹಿತ್ಯದಲ್ಲಿ ಸಾಹಿತ್ಯದಲ್ಲಿ ಮೊದಲನೇ ಸ್ವಾತಂತ್ರö್ಯ ಹೋರಾಟ’, ಅಂಕಣಕಾರ ರೋಹಿತ್ ಚಕ್ರತೀರ್ಥ ‘ಸಾಹಿತ್ಯದಲ್ಲಿ ಕ್ರಾಂತಿಸೂರ್ಯ’ ಕುರಿತು ಉಪನ್ಯಾಸ ನೀಡಲಿದ್ದಾರೆ.ವಿಮರ್ಶಕಿ ಡಾ.ಎನ್.ಆರ್.ಲಲಿತಾಂಬಾ ಅವಲೋಕನಗೈಯಲಿದ್ದಾರೆ.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ರಾಜ್ಯದ ವಿವಿಧೆಡೆಯ ಕಲಾವಿದರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಮೂರು ಗಂಟೆಯ ಅವಧಿಗೆ ಸಾಂಸ್ಕೃತಿಕ ರಸದೌತಣ ನಡೆಯಲಿದೆ.

ಜನವರಿ ೨೦ರಂದು ಬೆಳಿಗ್ಗೆ ಸಮನ್ವಯ ಕವಿ ಸಮ್ಮಿಲನದಲ್ಲಿ ಸೂರ್ಯ ಹೆಬ್ಬಾರ್ ಬೆಂಗಳೂರು, ಸುಜಾತಾ ಹೆಗಡೆ ಉಮ್ಮಚಿಗಿ, ಅನಿತಾ ಪೂಜಾರಿ ಮುಂಬೈ, ತನ್ಮಯಿ ಪ್ರೇಮಕುಮಾರ್ ಚಿಕ್ಕಮಗಳೂರು, ವೆಂಕಟೇಶನಾಯಕ ಮಂಗಳೂರು, ವಿದ್ಯಾಶ್ರೀ ಅಡೂರು ಮುಂಡಾಜೆ, ಸೋಮಶೇಖರ ಕೆ ತುಮಕೂರು, ಪೂರ್ಣಿಮಾ ಸುರೇಶ ಹಿರಿಯಡಕ, ಹೃತ್ಪೂರ್ವಕ ಕೋರ್ನ ಮಡಿಕೇರಿ, ಚಿನ್ಮಯ ಬೆಂಗಳೂರು, ಸುಭಾಷಿಣಿ ಬೆಳ್ತಂಗಡಿ, ಅಣ್ಣಪ್ಪ ಅರಬಗಟ್ಟೆ ತೀರ್ಥಹಳ್ಳಿ, ಮಾಣಿಮಾಡ ಜಾನಕೀ ಮಾಚಯ್ಯ ಮಡಿಕೇರಿ, ಸುಷ್ಮಾ ಗುರುಪುತ್ರ ಗೋಕಾಕ, ಡಾ.ಸ್ನೇಹಾ ಫಾತರಪೇಕರ ಅಂಕೋಲ, ವೀರೇಶ ಬಿ.ಅಜ್ಜಣ್ಣನವರ್ ಹರಿಹರ, ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು ಮತ್ತು ಪರಿಣಿತ ರವಿ ಎರ್ನಾಕುಲಂ ಸ್ವರಚಿತ ಕವಿತೆ ವಾಚನ ಮಾಡಲಿದ್ದಾರೆ. ಕವಿಯತ್ರಿ ಪ್ರೊ.ಸುಮಾ ವಸಂತ ಸಾವಂತ್ ಅವಲೋಕನಗೈಯಲಿದ್ದಾರೆ. 

ಅಂಕಣಕಾರ ಡಾ.ರೋಹಿಣಾಕ್ಷ ಶಿರ್ಲಾಲು ‘ಲಾವಣಿಗಳಲ್ಲಿ  ಸ್ವರಾಜ್ಯ ಕ್ರಾಂತಿ’, ಇಂಗ್ಲಿಷ್ ಉಪನ್ಯಾಸಕಿ ಪವಿತ್ರಾ ಮೃತ್ಯುಂಜಯಸ್ವಾಮಿ ‘ಕನ್ನಡ ನುಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯರು’ ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ. ಅಂಕಣಕಾರ ಪ್ರಭಾಕರ ಕಾರಂತ ಅವಲೋಕನಗೈಯಲಿದ್ದಾರೆ.

ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆ ಸಮಾರೋಪ ಭಾಷಣ ಮಾಡುವರು. ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಪ್ರೇಮ ಶಂಕರ ಮತ್ತು ಸಾಹಿತಿ ಡಾ.ನಾ ಮೊಗಸಾಲೆ ಉಪಸ್ಥಿತರಿರುವರು. 

ಸಮಸ್ತ ಭಾರತೀಯ ಭಾಷೆಗಳ ನಡುವೆ ಸೌಹಾರ್ದ ಭಾವವನ್ನು ಜಾಗೃತಗೊಳಿಸುವ ಧ್ಯೇಯೋದ್ದೇಶದೊಂದಿಗೆ ಈ ಸಮಾವೇಶ ಮೇಳೈಸಲಿದೆ. ಸಾಹಿತ್ಯಾಭಿಮಾನಿಗಳಿಗೆ ಪ್ರತಿನಿಧಿಗಳಿಗೆ ಊಟೋಪಚಾರ, ವಸತಿ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರೋನಾ ಹಿನ್ನೆಲೆಯಲ್ಲಿ ಸರ್ಕಾರದ ಸಂಪೂರ್ಣ ಮಾರ್ಗಸೂಚಿಯನ್ವಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post