ವಿದ್ರೋಹಿಗಳ ಅಪ ಪ್ರಚಾರದ ನಡುವೆ ಭರ್ಜರಿ ಯಶಸ್ಸು ದಾಖಲಿಸುತ್ತಿರುವ 'ದಿ ಕಾಶ್ಮೀರ್ ಫೈಲ್ಸ್‌'; ರಾಜ್ಯದಲ್ಲೂ ತೆರಿಗೆ ವಿನಾಯಿತಿ

Upayuktha
0

ಬೆಂಗಳೂರು: 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮುಸ್ಲಿಂ ಉಗ್ರವಾದಿಗಳಿಂದ ನಡೆದ ದೌರ್ಜನ್ಯ, ಮಾರಣ ಹೋಮಗಳ ಇತಿಹಾಸವನ್ನು ಸಮರ್ಥವಾಗಿ ಚಿತ್ರಿಸಿದ ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರ ಬಿಡುಗಡೆಯಾದ ಮೊದಲ ದಿನವೇ ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿದೆ.


ಇದನ್ನೊಂದು ಸಿನಿಮಾ ಅನ್ನುವುದಕ್ಕಿಂತಲೂ ವಾಸ್ತವ ಘಟನೆಗಳ ಚಿತ್ರಣ ಎನ್ನುವುದೇ ಸೂಕ್ತ ಎಂದು ಚಿತ್ರ ನೋಡಿದವರೆಲ್ಲರ ಒಕ್ಕೊರಲ ಮಾತು.


ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದ ಬಿಡುಗಡೆಗೆ ಮುನ್ನವೇ ಅದಕ್ಕೆ ತಡೆ ಕೋರಿ ಮುಂಬಯಿ ಹೈಕೋರ್ಟ್‌ನಲ್ಲಿ ಜಿಹಾದಿ ಮನಸ್ಥಿತಿಯ ವ್ಯಕ್ತಿಯೊಬ್ಬ ಹಾಕಿದ ಅರ್ಜಿ ಮತ್ತು ಹೈಕೋರ್ಟ್ ಅದನ್ನು ವಜಾಗೊಳಿಸಿದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಈ ಚಿತ್ರ ಭಾರೀ ಸುದ್ದಿಯಾಗುತ್ತಿದೆ.


ಮಾರ್ಚ್ 11ರಂದು ಬಿಡುಗಡೆಯಾದ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೇವಲ ಮೂರು ದಿನಗಳಲ್ಲಿ 12 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.


ಈ ಚಿತ್ರವನ್ನು ಹೆಚ್ಚು ಹೆಚ್ಚು ಜನ ಸುಲಭವಾಗಿ ವೀಕ್ಷಿಸುವಂತೆ ಆಗಲು ಹಲವು ರಾಜ್ಯ ಸರಕಾರಗಳು ಇದಕ್ಕೆ ತೆರಿಗೆ ವಿನಾಯಿತಿ ಘೋಷಿಸಿವೆ. ಗುಜರಾತ್‌, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಗೋವಾ ಸರಕಾರಗಳು ತೆರಿಗೆ ವಿನಾಯಿತಿ ಘೋಷಿಸಿದ ಬೆನ್ನಿಗೇ ಕರ್ನಾಟಕ ಸರಕಾರವೂ ತೆರಿಗೆ ವಿನಾಯಿತಿ ಪ್ರಕಟಿಸಿದೆ.



ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಬೆಂಗಳೂರಿನ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿಯವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ದೇಶ ಪ್ರೇಮ, ರಾಷ್ಟ್ರೀಯತೆಯ ಭಾವನೆ ಮೂಡಿಸುವ 'ದಿ ಕಾಶ್ಮೀರ್ ಫೈಲ್ಸ್‌' ಚಿತ್ರಕ್ಕೆ ಇದೇ ವೇಳೆ ಕೇರಳದ ಕಮ್ಯೂನಿಸ್ಟ್ ಸರಕಾರ ಡಬಲ್ ತೆರಿಗೆ ವಿಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.


ಚಿತ್ರದ ಪರವಾಗಿ ಏಳುತ್ತಿರುವ ಹವಾದಿಂದ ಕಂಗೆಟ್ಟ ಹಲವು ಮಾನವತಾವಾದದ ಸೋಗಿನ ವ್ಯಕ್ತಿಗಳು ಟ್ವಿಟರ್‌, ಫೇಸ್‌ಬುಕ್, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತರ ಹಲವು ಘಟನೆಗಳನ್ನು ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಜತೆ ತಳುಕು ಹಾಕುವ ಮೂಲಕ ವಿಫಲಗೊಳಿಸಲು ಯತ್ನಿಸುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.


ಅಭಿಷೇಕ್ ಅಗರ್ವಾಲ್ ಈ ಚಿತ್ರದ ನಿರ್ಮಾಪಕರು.  ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಪಲ್ಲವಿ ಜೋಷಿ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಶನಿವಾರ ಈ ಚಿತ್ರ ತಂಡ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಚಿತ್ರದ ಕುರಿತ ವಿವರಗಳನ್ನು ಹಂಚಿಕೊಂಡಿತ್ತು. ಅನುಪಮ್ ಖೇರ್ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top