ಪುತ್ತೂರು: ಪ್ರತಿಷ್ಟಿತ ಕಂಪನಿಗಳ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ವಿವೇಕಾನಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅರುಣ್ ಶಂಕರ್ ಕೆ (ತೃತೀಯ ಬಿಎಸ್ಸಿ), ದೀಕ್ಷಿತ ಪಿ.ಕೆ (ತೃತೀಯ ಬಿಎಸ್ಸಿ), ನಿತಿನ್ ಕುಮಾರ್ (ತೃತೀಯ ಬಿಎಸ್ಸಿ), ಯಶಸ್ವಿನಿ ಕಿಣಿ, (ತೃತೀಯ ಬಿ.ಎಸ್.ಸಿ) ಸೃಜನ್ ಸೂರ್ಯ ಕೆ.ಎನ್ (ತೃತೀಯ ಬಿ.ಸಿ.ಎ), ಹೇಮಂತ್ ಐ.,(ತೃತೀಯ ಬಿ.ಸಿ.ಎ), ಮೊಕ್ಷೀತಾ (ತೃತೀಯ ಬಿ.ಸಿ.ಎ) ಹಾಗೂ ಅನುಪಮಾ.ಕೆ (ತೃತೀಯ ಬಿ.ಸಿ.ಎ) ಆಯ್ಕೆಯಾಗಿದ್ದಾರೆ. ಟಿಸಿಎಸ್, ವಿಪ್ರೋ, ಎಲ್ ಟಿ ಐ Accenture, Capgemini ಮೊದಲಾದ ಪ್ರತಿಷ್ಠಿತ ಕಂಪನಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು.
ವಿದ್ಯಾರ್ಥಿಗಳಿಗೆ ಕಾಲೇಜಿನ ಉಪನ್ಯಾಸಕರು ಮಾರ್ಗದರ್ಶನ ನೀಡಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದದಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ