ಶ್ರೀನಿವಾಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಕ್ಷೇತ್ರ ಕಾರ್ಯ

Upayuktha
0

ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರಕ್ಕೆ ಅಧ್ಯಯನ ಪ್ರವಾಸ



ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿಎ ಎ.ರಾಘವೇಂದ್ರರಾವ್ ಅವರ ಮಾರ್ಗದರ್ಶನದಲ್ಲಿ 2022 ರ ಮಾರ್ಚ್ 4 ರಂದು ವಿಧಿವಿಜ್ಞಾನ ವಿಭಾಗವು ಫೋರೆನ್ಸಿಕ್ ಸೈನ್ಸ್‌ನಲ್ಲಿ ಮತ್ತು ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ ವ್ಯಸನಿಗಳ ಲಿಂಕ್‌ ಇಂಟಿಗ್ರೇಟೆಡ್ ರಿಹ್ಯಾಬಿಲಿಟೇಶನ್ ಸೆಂಟರ್  ಮಂಗಳೂರು- ಇದರ ಸಹಯೋಗದೊಂದಿಗೆ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.


ಪುನರ್ವಸತಿ ಕೇಂದ್ರದ ಕಾರ್ಯಗಳು ಮತ್ತು ಕಾರ್ಯವಿಧಾನಗಳನ್ನು ಕಲಿಯುವುದು ಮತ್ತು ವ್ಯಸನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಮತ್ತು ದೈಹಿಕ, ಮಾನಸಿಕ ಮತ್ತು ಅರಿವಿನ ಸಾಮರ್ಥ್ಯಗಳನ್ನು ಮರಳಿ ಪಡೆಯಲು ಒದಗಿಸಬೇಕಾದ ಕಾಳಜಿಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಈ ಕ್ಷೇತ್ರ ಪ್ರವಾಸ ಏರ್ಪಡಿಸಲಾಗಿತ್ತು.


ಲಿಂಕ್ ಇಂಟಿಗ್ರೇಟೆಡ್ ಪುನರ್ವಸತಿ ಕೇಂದ್ರದ ಯೋಜನಾ ಸಂಯೋಜಕ ಧನಂಜಯ್ ಅವರು, ವ್ಯಸನಿಗಳ ಮೇಲೆ ಪ್ರಭಾವ ಬೀರುವ ಜೈವಿಕ, ಮಾನಸಿಕ, ಸಾಮಾಜಿಕ ಮತ್ತು ಪರಿಸರದ ಅಂಶಗಳೊಂದಿಗೆ ಚಟಕ್ಕೆ ಕಾರಣವಾಗುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದರು.


ದೈಹಿಕ ಮತ್ತು ಮಾನಸಿಕ ಸುಧಾರಣೆ ಮೂಲಕ ದುಶ್ಚಟವನ್ನು ಹಂತ ಹಂತವಾಗಿ ಬಿಡಿಸುವ ಪ್ರಕ್ರಿಯೆಯನ್ನು ವಿವರಿಸುವ ಮೂಲಕ ತಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಂಡರು. ಇದೇ ವೇಳೆ ಪುನರ್ವಸತಿ ಕೇಂದ್ರದ ಇಬ್ಬರು ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಂಡರು ವಿಧಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಾಳವಿಕಾ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top