ಆಳ್ವಾಸ್‌ನ ಎಂ.ಕಾಂ. ಎಚ್.ಆರ್.ಡಿ ವಿಭಾಗದ ರಿಸರ್ಚ್ ಫೋರಂ ಉದ್ಘಾಟನೆ

Upayuktha
0

 

ಮೂಡುಬಿದಿರೆ: "ಸಂಶೋಧನೆಯ ಉದ್ದೇಶ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿರಬೇಕು"ಎಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ತರಬೇತುದಾರ ಡಾ. ಪ್ರವೀಣ್ ಕೆ ಹೇಳಿದರು.


ಎಂ.ಕಾಂ. ಎಚ್. ಆರ್. ಡಿ ವಿಭಾಗದ ರಿಸರ್ಚ್ ಫೋರಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ 'ಉನ್ನತ ಶಿಕ್ಷಣದಲ್ಲಿ ಸಂಶೋಧನೆಯ ಪ್ರಾಮುಖ್ಯತೆ ಮತ್ತು ಪ್ರಸ್ತುತತೆ ' ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಸಂಶೋಧನೆಯು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಶೈಕ್ಷಣಿಕ ಜ್ಞಾನ ಹಾಗೂ ಉದ್ಯೋಗಕ್ಕೂ ಸಹಕಾರಿಯಾಗಲಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿಪುಲ ಅವಕಾಶಗಳಿದ್ದು ಪದವಿ ಶಿಕ್ಷಣದ ಜತೆಗೆ ಸಂಶೋಧನೆಗೂ ಒತ್ತು ನೀಡಬೇಕು, ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.


ವಿಭಾಗದ ಸಂಯೋಜಕಿ ಶಾಝಿಯಾ ಖಾನುಮ್, ಉಪನ್ಯಾಸಕರಾದ ಪದ್ಮನಾಭ್, ಶುಭ, ವಂದನಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ವೇತ ನಿರೂಪಿಸಿ, ಸಿಂಚನ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top