ಕೆನಡಾದಲ್ಲಿ ಯಕ್ಷಗಾನ: ಕಲ್ಕೂರ ಪ್ರತಿಷ್ಠಾನದಿಂದ ನಾಳೆ ವಿಶೇಷ ಸಂವಾದ

Upayuktha
0


ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಾಳೆ ( ಫೆ.25, ಶುಕ್ರವಾರ) ಬೆಳಗ್ಗೆ 10 ಗಂಟೆಗೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡವಾಣೆಯಲ್ಲಿರುವ ಮಂಜುಪ್ರಾಸಾದದಲ್ಲಿ 'ಕೆನಡಾದಲ್ಲಿ ಯಕ್ಷಗಾನ' ವಿಚಾರವಾಗಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.


ಕೆನಡಾದ ಟೊರೊಂಟೊ ದಲ್ಲಿರುವ ರಾಘು ಕಟ್ಟಿನಕೆರೆ ಅವರು ಸಂವಾದ ನಡೆಸಿಕೊಡಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರರಾದ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ ಡಾ. ಎಂ ಪ್ರಭಾಕರ ಜೋಷಿ ಅವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ.


ಸಂವಾದದಲ್ಲಿ ಪೊಳಲಿ ನಿತ್ಯಾನಂದ ಕಾರಂತ, ಪ್ರೊ. ಜಿ.ಕೆ ಭಟ್‌ ಸೇರಾಜೆ, ಸರ್ಪಂಗಳ ಈಶ್ವರ ಭಟ್, ಪಿ.ವಿ ಪರಮೇಶ್, ಸೇರಾಜೆ ಸೀತಾರಾಮ ಭಟ್, ಪ್ರಿನ್ಸಿಪಾಲ್ ಶಂಕರ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ರಮೇಶ್ ಭಟ್ ಕದ್ರಿ, ಎಲ್ಲೂರು ರಾಮಚಂದ್ರ ರಾವ್, ಶರತ್ ಕುಮಾರ್ ಕದ್ರಿ, ಡಾ. ದಿನಕರ ಎಸ್. ಪಚ್ಚನಾಡಿ, ಸುಮಂಗಲಾ ರತ್ನಾಕರ್, ಪೂರ್ಣಿಮಾ ರಾವ್ ಪೇಜಾವರ, ಪಿ.ವಿ ರಾವ್, ಸಂಜಯ ಕುಮಾರ್, ಅಗರಿ ರಾಘವೇಂದ್ರ ರಾವ್, ಪಿ. ಶ್ರೀಧರ ಐತಾಳ್‌, ಪೂರ್ಣಿಮಾ ಯತೀಶ್ ರೈ, ಸದಾಶಿವ ಮಾಸ್ಟರ್‌ ಕೋಟೆಕಾರ್‌, ಪಿ. ವಾಸುದೇವ ಐತಾಳ್‌ ಸುರತ್ಕಲ್‌ ಅವರು ಭಾಗವಹಿಸಲಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top