ಗೋವಾದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ ಯಾಚನೆ

Upayuktha
0

ಪಣಜಿ: ಗೋವಾದಲ್ಲಿ ಕನ್ನಡಿಗರ ಮತಗಳನ್ನು ಸೆಳೆಯಲು ಕರ್ನಾಟಕದ ವಿವಿಧ ಪಕ್ಷಗಳ ನಾಯಕರು ಗೋವಾದಲ್ಲಿ ಕೊನೆಯ ಕಸರತ್ತು ನಡೆಸಿದ್ರೆದರು. ಮಂಗಳೂರು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ರವರು ಗೋವಾಕ್ಕೆ ಆಗಮಿಸಿ ಗೋವಾದಲ್ಲಿ ಪ್ರಮುಖವಾಗಿ ಸಾರಸ್ವತ ಸಮಾಜದವರನ್ನು ಭೇಟಿ ಮಾಡಿ ಪಕ್ಷದ ಪರ ಮತ ಯಾಚಿಸಿದರು.


ಗೋವಾ ರಾಜಧಾನಿ ಪಣಜಿ ಸಮೀಪದ ಟೊಂಕಾ, ಕಾಮರಾಭಾಟ್, ಭೇಟಿ ನೀಡಿ ಕನ್ನಡಿಗರನ್ನು ಭೇಟಿ ಮಾಡಿ ಪಕ್ಷದ ಪರ ಮತಯಾಚಿಸಿದರು. ಸಾರಸ್ವತ ಸಮಾಜದ ಪ್ರಮುಖರ ಮನೆಗಳಿಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಎಂಎಲ್‍ಸಿ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮಂಗಳೂರು ಬಿಜೆಪಿ ಜಿಲ್ಲಾಪ್ರಮುಖ ಸಂಜಯ ಪ್ರಭು, ಉದ್ಯಮಿ ವಿನಾಯಕ ಶಾನಭಾಗ್, ಸೇರಿದಂತೆ ಸಾರಸ್ವತ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top