ಕೃಷ್ಣಾರ್ಪಣ- ಲೋಕಾರ್ಪಣ: ಮಣಿಮುಂಡ ಶ್ರೀ ಕೃಷ್ಣ ಉಪಾಧ್ಯಾಯರ ಸಂಸ್ಮರಣಾ ಗ್ರಂಥ ಫೆ.27ಕ್ಕೆ ಬಿಡುಗಡೆ

Upayuktha
0

ಮಂಗಳೂರು: ಖ್ಯಾತ ಶಿಕ್ಷಕರು, 'ಉಪಾಧ್ಯ ಮಾಸ್ತರ್‌' ಎಂದೇ ಖ್ಯಾತಿ ಹೊಂದಿದ್ದ ಜನಾನುರಾಗಿ ಅಜಾತ ಶತ್ರು ದಿವಂಗತ ಮಣಿಮುಂಡ ಶ್ರೀಕೃಷ್ಣ ಉಪಾಧ್ಯಾಯ ಅವರ ಸ್ಮರಣಾರ್ಥ "ಕೃಷ್ಣಾರ್ಪಣ' ಎಂಬ ಸಂಸ್ಮರಣ ಗ್ರಂಥ ಫೆ.27ರಂದು ಲೋಕಾರ್ಪಣೆಯಾಗಲಿದೆ.


ಮಂಗಳೂರಿನ ವೈದ್ಯ ಸಾಹಿತಿ ಡಾ ಸುರೇಶ ನೆಗಳಗುಳಿಯವರ ಸಂಪಾದಕತ್ವದಲ್ಲಿ ಈ ಗ್ರಂಥವೀಗ ಬಿಡುಗಡೆಗೆ ಸಿದ್ಧವಾಗಿದೆ. ಖ್ಯಾತ ವೈದ್ಯ ಹಾಗೂ ಸಾಹಿತಿ ಮತ್ತು ಉಪಾಧ್ಯಾಯರ ಶಿಷ್ಯ ಡಾ ರಮಾನಂದ ಬನಾರಿಯವರು ಗ್ರಂಥ ಬಿಡುಗಡೆ ಮಾಡಲಿದ್ದಾರೆ.


ಜನತಾ ವಿದ್ಯಾವರ್ಧಕ ಸಂಘದ ಮುಖ್ಯಸ್ಥೆ ವಾರಣಾಸಿ ಅಶ್ವಿನಿ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಜನತಾ ವಿದ್ಯಾ ಸಂಸ್ಥೆಯ ಸಭಾ ಭವನದಲ್ಲಿ ಫೆ.27ರ ಭಾನುವಾರದಂದು ಸಂಜೆ 3 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.


ದಿವಂಗತ ಶ್ರೀಕೃಷ್ಣ ಉಪಾಧ್ಯಾಯರ ಸಾವಿರಾರು ಶಿಷ್ಯರು, ಅಭಿಮಾನಿಗಳು, ಬಂಧು ಬಳಗದವರ ಒತ್ತಾಸೆಯಂತೆ ಈ ಸಂಸ್ಮರಣಾ ಗ್ರಂಥವನ್ನು ಸಿದ್ಧಪಡಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ, ಭಾಸ್ಕರ ಉಪಾಧ್ಯಾಯರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top