ಸ್ವಯಂರಕ್ಷಣೆ ತರಬೇತಿ ಕಾರ್ಯಕ್ರಮ

Upayuktha
0

 

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಎಸ್‌ಡಬ್ಲ್ಯೂ ವಿಭಾಗದ ಸ್ಪಟಿಕಾ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ "ಸ್ವಯಂರಕ್ಷಣೆ" ತರಬೇತಿ ಕಾರ್ಯಕ್ರಮ ಜರಗಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಸಂಸ್ಥೆಯ ಕರಾಟೆ ತರಬೇತುದಾರ ಚಂದ್ರಶೇಖರ್ ಶೆಟ್ಟಿ ಭಾಗವಹಿಸಿದರು. ಪ್ರತಿಯೊಬ್ಬರಿಗೂ ಆತ್ಮರಕ್ಷಣೆ ಬಗೆಗಿನ ಜ್ಞಾನ ಮುಖ್ಯವಾದದ್ದು. ಪ್ರತಿ ಜೀವಿ ತನ್ನನ್ನು ರಕ್ಷಿಸಿಕೊಳ್ಳುವ ಆಯುಧವನ್ನು ಪ್ರಾಕೃತಿಕವಾಗಿ ಪಡೆದುಕೊಂಡಿರುತ್ತದೆ. ಆ ಪ್ರಕೃತಿದತ್ತ ಆಯುಧಗಳು ನಮ್ಮೆಲ್ಲರ ದೇಹದಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ರೀತಿ ಎಲ್ಲರೂ ತಿಳಿದಿರಬೇಕು ಎಂದರು.


ಸಾಂದರ್ಭಿಕ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಕೆಲವು ಭಂಗಿಗಳನ್ನು ಪ್ರದರ್ಶಿಸಿ, ಅಭ್ಯಸಿಸುವಂತೆ ಹೇಳಿದರು.


ಕಾರ್ಯಕ್ರಮದಲ್ಲಿ ಸ್ಪಟಿಕಾ ವೇದಿಕೆಯ ಸಂಯೋಜಕರಾದ ಡಾ ಸಪ್ನ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ರಿಷಿಕೇಶ್ ನಿರೂಪಿಸಿ, ವಿದ್ಯಾರ್ಥಿನಿ ನಿಕ್ಷಿತಾ ಸ್ವಾಗತಿಸಿ, ಹರಿಣಿ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top