ಫೆ.14: ಶ್ರೀನಿವಾಸ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ

Upayuktha
0

ಮಂಗಳೂರು: ನಗರದ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನವನ್ನು ಫೆ.14ರಂದು ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಆಚರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಶ್ರೀನಿವಾಸ ವಿವಿ ಕುಲಪತಿ ಹಾಗೂ ಎ ಶ್ಯಾಮರಾವ್ ಫೌಂಡೇಶನ್‌ ಅಧ್ಯಕ್ಷರಾದ ಡಾ. ಸಿಎ ಎ. ರಾಘವೇಂದ್ರ ರಾವ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌ಎಂಪಿಟಿ ಅಧ್ಯಕ್ಷ ಡಾ ವೆಂಕಟರಮಣ ಅಕ್ಕರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.


ಶ್ರೀನಿವಾಸ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರಾದ ಡಾ. ಎ. ಶ್ರೀನಿವಾಸ ರಾವ್ ಸ್ವಾಗತಿಸಲಿದ್ದಾರೆ. ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯೆಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್ ರಾವ್, ಪ್ರೊ. ಶ್ರೀಮತಿ ಎ. ಮಿತ್ರಾ ಎಸ್ ರಾವ್, ಶ್ರೀಮತಿ ಪದ್ಮಿನಿ ಕುಮಾರ್‌ ಮತ್ತು ಉಪ ಕುಲಪತ ಡಾ. ಪಿ.ಎಸ್ ಐತಾಳ್‌ ಅವರು ಉಪಸ್ಥಿತರಿರುತ್ತಾರೆ.


ಸಮಾರಂಭದಲ್ಲಿ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ರಾಂಕ್‌ ವಿಜೇತರಿಗೆ ಚಿನ್ನದ ಪದಕಗಳ ಪ್ರದಾನ, ಪಿಎಚ್‌.ಡಿ ಪುರಸ್ಕೃತ ಫ್ಯಾಕಲ್ಟಿ ಸದಸ್ಯರಿಗೆ ಸನ್ಮಾನ, ಎ. ಶ್ಯಾಮರಾವ್ ಸ್ಮಾರಕ ಉತ್ಕೃಷ್ಟತಾ ಪ್ರಶಸ್ತಿ, ಎ. ರಾಮರಾವ್‌ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಇತರ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top