ಪರಿಚಯ: ನಟರಾಜನ ಆರಾಧಕಿ ವಿದುಷಿ ಹರ್ಷಿತಾ ಬದಿಯಡ್ಕ

Upayuktha
0

ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಬಹುಮುಖ ಪ್ರತಿಭೆಯು ವಿದುಷಿ ಹರ್ಷಿತ ಬದಿಯಡ್ಕ.

ನೃತ್ಯ ಪ್ರದರ್ಶನ ಹಮ್ಮಿಕೊಂಡರೆ ಪ್ರೇಕ್ಷಕರ ಕಣ್ಮನ ಸೆಳೆಯುವ ನೃತ್ಯಗಾರ್ತಿ, ನಾಟಕದಲ್ಲಿ ಭಾಗಿಯಾದರೆ ವೀಕ್ಷಕರ ಮನಗೆಲ್ಲುವ ಅಭಿನೇತ್ರಿ, ಚಿತ್ರ ರಚನೆಯಲ್ಲಿ ತೊಡಗಿದರೆ ನೋಡುಗರ ಕಣ್ಣಿಗೆ ಹಬ್ಬ ಮನಸ್ಸಿಗೆ ಮುದ ನೀಡುವ ಕಲಾವಿದೆ ಯೋಗ ಅಭ್ಯಾಸದಲ್ಲೂ, ಶಿಕ್ಷಣ ಕ್ಷೇತ್ರದಲ್ಲೂ ಸೈ ಎನಿಸಿಕೊಂದ ಸಾಧಕಿ, ಯಾವುದೇ ಒಂದೇ ಕಲೆಗೆ ಸೀಮಿತವಾದೇ ತಾನು ತೊಡಗಿಸಿಕೊಂಡ ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದವರು ಬಹುಮುಖ ಪ್ರತಿಭೆ ವಿದುಷಿ ಹರ್ಷಿತ ಬದಿಯಡ್ಕ.


ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಕನಕಪ್ಪಾಡಿ ನಿವಾಸಿ ಭಾಸ್ಕರ ಜೋಗಿ ಬದಿಯಡ್ಕ ಹಾಗು ಶಿಕ್ಷಕಿ ರಾಜೇಶ್ವರಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ತನ್ನ ಸಣ್ಣ ವಯಸ್ಸಿನಿಂದಲೇ ನಾಟ್ಯ ಹಾಗು ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಿಂದ ತನ್ನ ಶೈಕ್ಷಣಿಕ ಜೀವನ ಪ್ರಾರಂಭಿಸಿದ ಇವರು, ತನ್ನ ಆರನೇ ವಯಸ್ಸಿನಲ್ಲಿ ತನ್ನ ನೃತ್ಯ ಕ್ಷೇತ್ರದಲ್ಲಿನ ವಿಶೇಷ ಆಸಕ್ತಿ, ಪೋಷಕರ ಬೆಂಬಲ, ಪ್ರೋತ್ಸಾಹದ ಫಲವಾಗಿ ಪುತ್ತೂರು ವೈಷ್ಣವಿ ನಾಟ್ಯಾಲಯದ ನೃತ್ಯಶಿಕ್ಷಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆಯಾಗಿ 2005ರಲ್ಲಿ ಭರತನಾಟ್ಯ ತರಬೇತಿ ಪಡೆಯಲು ಪ್ರಾರಂಭಿಸಿದರು.


ಗುರುವಾಯೂರ್, ಉಡುಪಿ ರಾಜಾಂಗಣ, ಮೂಡಬಿದ್ರೆ, ಕಟೀಲು, ಒಡಿಯೂರು, ಪುತ್ತೂರು, ಅಡೂರ್, ಬಂಟ್ವಾಳ, ಬದಿಯಡ್ಕ, ಈಶ್ವರಮಂಗಲ ಸೇರಿದಂತೆ ಕೇರಳ-ಕರ್ನಾಟಕದ ಹಲವೆಡೆ ನೃತ್ಯಪ್ರದರ್ಶನ ಕೈಗೊಂಡದ್ದಾರೆ. ಹಾಗೆಯೇ ಈಗಾಗಲೇ ಇವರು 300ರಕ್ಕಿಂತಲೂ ಅಧಿಕ ವೇದಿಕೆಗಳಲ್ಲಿ ನೃತ್ಯಪ್ರದರ್ಶನ ನೀಡಿದ್ದಾರೆ.


ಇಷ್ಟು ಮಾತ್ರವಲ್ಲದೆ ಕುಂಬಳೆಯಲ್ಲಿ ಜರಗಿದ ಆಕಾಶವಾಣಿ ಕಾರ್ಯಕ್ರಮದಲ್ಲಿ, ಮಂಗಳೂರಿನ ಕರಾವಳಿ ಉತ್ಸವ ತುಳುವೆರೆ ಸಮಾವೇಶ ಮತ್ತಿತರ ಕಾರ್ಯಕ್ರಮಗಳಲ್ಲೂ ನೃತ್ಯಪ್ರದರ್ಶನ ನೀಡಿ ಜನಮನ್ನಣೆ ಪಡೆದಿದ್ದರು. ಹಾಗೆಯೇ ಇವರು ಸಾಮಜಿಕ ಜಾಲತಾಣಗಳಲ್ಲಿನ ಕಲಾಭಿಮಾನಿಗಳಿಗಾಗಿ “ಹರ್ಷಿತಾ ಜೋಗಿ” ಎಂಬ ಯೂಟ್ಯೂಬ್ ಚಾನೆಲ್ ನನ್ನು ನಿರ್ಮಿಸಿದ್ದು, ತನ್ನ ನೃತ್ಯಪ್ರದರ್ಶನಗಳನ್ನು ಈ ಮೂಲಕ ಪ್ರಕಟಿಸುತ್ತಿದ್ದು, ಇತ್ತೀಚಿಗೆ ಪ್ರಕಟಿಸಿದ ತುಣುಕೊಂದು ಆರು ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದರು.


ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿ ನಡೆಸುವ 2008-09ರಲ್ಲಿ ಭರತನಾಟ್ಯ ಜೂನಿಯರ್, 2014-15ರಲ್ಲಿ ಸೀನಿಯರ್ ,2019-20ರಲ್ಲಿ ವಿದ್ವತ್ ಪೂರ್ವ, 2020-21ರಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ಇವರು ಉನ್ನತ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅಷ್ಟೇ ಅಲ್ಲದೇ ವಿದ್ವತ್ ಅಂತಿಮ ಪರೀಕ್ಷೆಯಲ್ಲಿನ ತೇರ್ಗಡೆಯೊಂದಿಗೆ ವಿದುಷಿ ಎಂಬ ಪದವಿಗೂ ಇವರು ಭಾಜನರಾಗಿದ್ದಾರೆ. ಪ್ರಥಮ, ದ್ವಿತೀಯ ವರ್ಷದ ಪಿಯುಸಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಡೆದು, ಬಳಿಕ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ʼಬಿಎಸ್ಸಿ ಇನ್ ಬಯೋ ಮೆಡಿಕಲ್ ಸೈನ್ಸ್ ಆನರ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದರು. ಶಿಕ್ಷಕರ ಪ್ರೋತ್ಸಾಹದ ಫಲವಾಗಿ ವಿಶ್ವವಿದ್ಯಾನಿಲಯದ ಇಂಡೋ-ಜಪಾನ್ ಸಮಾವೇಶದಲ್ಲೂ ಕೂಡ ನೃತ್ಯಪ್ರದರ್ಶಿಸಲು ಇವರಿಗೆ ಅವಕಾಶ ದೊರೆತಿದೆ. ಆನ್ಲೈನ್ ಮುಖಾಂತರ ಏರ್ಪಡಿಸಿದ್ದ ಖ್ಯಾತ ಮಲಯಾಳಂ ನಟಿ ನವ್ಯ ನಾಯರ್ ಸಾರಥ್ಯದ ಹೈಗ್ಲಿಟ್ ಕಮ್ಯುನಿಟಿಯ ನೇತೃತ್ವದಲ್ಲಿ ನಡೆದ ʼಎಕ್ಸಿಬಯೊʼ ಶಾಸ್ತ್ರೀಯ ಸೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಶ್ರೀಭಾರತೀ ಡಿಗ್ರಿ ಕಾಲೇಜ್, ನಂತೂರು, ಮಂಗಳೂರು ಹಾಗೂ ʼಕಲಾಭಾರತೀʼ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ನಡೆದ ʼಕಲಾ ಸಿಂಚನ 2020ʼ ಕಾರ್ಯಕ್ರಮದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ.


ಇವರಿಗೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ವತಿಯಿಂದ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಎಂಬ ನೆಲೆಯಲ್ಲಿ ʼಸ್ವರ್ಣಾಂಕುರ ಪ್ರಶಸ್ತಿʼ ಲಭಿಸಿತ್ತು ಮತ್ತು ಇನ್ನಿತರ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಏರ್ಪಡಿಸಿ ಅಭಿನಂದನೆಗೆ ಪಾತ್ರವಾಗಿದ್ದರು. ತಾನು ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಸಾಲದು ತನ್ನಂತೆ ಇತರರೂ ಕೂಡ ಸಾಧನೆ ಮಾಡಬೇಕು, ಕಲಾ ಕ್ಷೇತ್ರ ಮತ್ತಷ್ಟು ಬೆಳೆಯಬೇಕು ಎನ್ನುವ ಹಂಬಲವನ್ನು ಇಟ್ಟುಕೊಂಡು ಇವರು, ಈಗಾಗಲೇ ನೃತ್ಯ ಶಿಕ್ಷಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಿರ್ದೇಶನದಲ್ಲಿ ವೈಷ್ಣವಿ ನಾಟ್ಯಾಲಯ ಕುಂಬಳೆಯಲ್ಲಿ 30ಕ್ಕಿಂತಲೂ ಅಧಕ ಮಂದಿಗೆ ತರಬೇತಿ ನೀಡುತ್ತಿದ್ದು, ಇವರ ಶಿಷ್ಯೆಯರು ನೃತ್ಯಪ್ರದರ್ಶನ ನೀಡಿ ಹೊಗಳಿಕೆಗೆ ಪಾತ್ರವಾಗಿದ್ದರು.


ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣೆಯೊಂದಿಗೆ ತೇರ್ಗಡೆಗೊಂಡ ಇವರಿಗೆ ಕಾಸರಗೋಡು ಜೋಗಿ ಸಮಾಜದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಪ್ರಸ್ತುತ ಫಾದರ್ ಮುಲ್ಲರ್ ಕಾಲೇಜು ಆಫ್ ಅಲೈಡ್ ಸೈನ್ಸ್ನಲ್ಲಿ ʼಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ʼ ಶಿಕ್ಷಣದೊಂದಿಗೆ ನೃತ್ಯ, ಸಂಗೀತ, ಯೋಗ, ಚಿತ್ರಕಲೆ, ಯಕ್ಷಗಾನ, ನಾಟಕ, ಕ್ರೀಡಾ ಕ್ಷೇತ್ರಗಳಲ್ಲಿ ಅದ್ವಿತೀಯ ಪ್ರದರ್ಶನ ನೀಡುತ್ತಾ, ತನ್ನದೇ ಆದ ಛಾಪು ಮೂಡಿಸುತ್ತಾ ಬಂದ ಇವರು, ಶಿಕ್ಷಣದ ಬಳಿಕವೂ ಉದ್ಯೋಗದೊಂದಿಗೆ ಇನ್ನಷ್ಟು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಬೇಕು, ಕಲಾಕ್ಷೇತ್ರದ ಬೆಳವಣಿಗೆಗೆ ತನ್ನ ಕೈಲಾದ ಸೇವೆಯನ್ನು ಮೂಡಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನುಗ್ಗುತ್ತಿದ್ದಾರೆ. ತನಗೆ ತನ್ನ ಆಸಕ್ತಿಯನ್ನು ಮನಗೊಂಡು ಪ್ರೋತ್ಸಾಹ ನೀಡಿದ ಪೋಷಕರು, ತನ್ನನ್ನು ತನ್ನ ಮಗಳಂತೆ ಕಂಡು, ನೃತ್ಯ ತರಬೇತಿ ನೀಡಿ, ಸೂಕ್ತ ಮಾರ್ಗದರ್ಶನ ನೀಡಿದ ನೃತ್ಯ ಶಿಕ್ಷಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ವೈಷ್ಣವಿ ನಾಟ್ಯಾಲಯದ ಹಿಮ್ಮೇಳ ಕಲಾವಿದರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಅಧ್ಯಾಪಕ ವೃಂದ, ಕುಟುಂಬ ನೀಡಿದ ಪ್ರೋತ್ಸಾಹ, ವೇದಿಕೆಯನ್ನು ಕಲ್ಪಿಸಿಕೊಟ್ಟಂತಹ ಸಂಘಟನೆಗಳು, ಹುರಿದುಂಬಿಸಿದ ಅಭಿಮಾನಿಗಳೇ ತನ್ನ ಸಾಧನೆಯ ಹಿಂದಿನ ಶಕ್ತಿ ಎನ್ನುತ್ತಾರೆ ವಿದುಷಿ ಹರ್ಷಿತಾ ಬದಿಯಡ್ಕ. ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಹಾಗೂ ಛಲವಿದ್ದರೆ ಮಾರ್ಗ ಎನ್ನುವ ಸಂದೇಶವೂ ನಮಗೆ ತಿಳಿದುಬರುತ್ತದೆ. ಎಲ್ಲರೂ ಕೂಡ ಜೀವನದಲ್ಲಿ ಒಂದು ಉತ್ತಮ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕ ಪರಿಶ್ರಮವನ್ನು ಪಡಬೇಕು. ಆಗ ನಮ್ಮ ಗುರಿಸಾಧನೆ ಸಾಧ್ಯ.

-ಹರ್ಷಿತಾ ಜೋಗಿ. ಎಂ

ಪ್ರಥಮ ಪದವಿ, ಪತ್ರಿಕೋದ್ಯಮ ವಿಭಾಗ. 


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top