ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು ನವೆಂಬರ್ 2021ರ ಆಯುರ್ವೇದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ. ಈ ಮೂಲಕ ಆಯುರ್ವೇದ ಕಾಲೇಜಿನ 15 ಸ್ನಾತಕೋತ್ತರ ವಿಭಾಗದ 39 ವಿದ್ಯಾರ್ಥಿಗಳು ಉತ್ತಮ ಮತ್ತು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪ್ರತ್ಯೇಕ ವಿಭಾಗಗಳಲ್ಲಿ 12 ರ‍್ಯಾಂಕ್ ಪಡೆದಿರುತ್ತಾರೆ.
ಪಂಚಕರ್ಮ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಲಿಫಾಮ್ ರೋಶನಾರ (1ನೇ ರ‍್ಯಾಂಕ್), ಅಗದ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಶ್ರುತಿ ಸುಧಾಕರ್ (2ನೇ ರ‍್ಯಾಂಕ್), ಶಾಲಾಕ್ಯ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಆರ್ಯ ಡಿ. ಎಸ್ 2ನೇ ರ‍್ಯಾಂಕ್, ಡಾ. ಮೀನು ಪಿ. ಆರ್ 9ನೇ ರ‍್ಯಾಂಕ್, ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ವಿಷ್ಣು ಆರ್ (5ನೇ ರ‍್ಯಾಂಕ್) ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಿತ್ಯ ಎ.ಕೆ (6ನೇ ರ‍್ಯಾಂಕ್), ಮಾನಸರೋಗ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಅಂಜಲಿ ವರ್ಗೀಸ್ (6ನೇ ರ‍್ಯಾಂಕ್), ಡಾ. ಅನಘ ಟಿ.ವಿ (9ನೇ ರ‍್ಯಾಂಕ್), ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಖುಶ್‌ಬು ಟಿ.ಟಿ (7ನೇ ರ‍್ಯಾಂಕ್), ಶರೀರ ರಚನಾ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಲಕ್ಷ್ಮಿ ಜೆ. (7ನೇ ರ‍್ಯಾಂಕ್), ರೋಗ ನಿಧಾನ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಅನು ಆನಂದ್ (6ನೇ ರ‍್ಯಾಂಕ್), ರಸಶಾಸ್ತ್ರ ಭೈಷಜ್ಯ ಕಲ್ಪನ ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಿರಂಜನ ಮಂಜುನಾಥ್ ಹೆಬ್ಬಾರ್ (10ನೇ ರ‍್ಯಾಂಕ್) ಪಡೆದಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರಾಂಶುಪಾಲ ಡಾ.ಸಜಿತ್ ಎಂ ಮತ್ತು ಸ್ನಾತಕೋತ್ತರ ವಿಭಾಗದ ಡಾ. ರವಿಪ್ರಸಾದ್ ಹೆಗ್ಡೆ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ