ಕಪ್ಪತ್ತ ಗಿರಿ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ನಾರಾಯಣ ಕುಂಬ್ರ ಆಯ್ಕೆ

Upayuktha
0

ದ.ಕ: ಕಪ್ಪತ್ತ ಗಿರಿ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರನ್ನಾಗಿ ಶ್ರೀಯುತ ನಾರಾಯಣ ಕುಂಬ್ರ ಇವರು ಆಯ್ಕೆಯಾಗಿದ್ದಾರೆ. ಇವರು ಕ್ರಿಯಾಶೀಲ ಬರಹಗಾರರು. ಸಾಹಿತ್ಯದಲ್ಲಿ ಅನುಪಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಕಪ್ಪತ್ತ ಗಿರಿ ಸಾಹಿತ್ಯ ವೇದಿಕೆ ಸಂಸ್ಥಾಪಕರು ಶ್ರೀಮತಿ ಚಂದ್ರಕಲಾ ಎಂ ಇಟಗಿಮಠ, ಗದಗ - ಕಳಸಾಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಾರಾಯಣ ಕುಂಬ್ರ


ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಲ್ಯಾಬ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಪಾರ ಒಲವನ್ನು ಹೊಂದಿರುವ ಇವರು 150ಕ್ಕಿಂತ ಅಧಿಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದ್ದಾರೆ. ಅನೇಕ ಸಾಹಿತ್ಯ ಬಳಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


ಪ್ರಸ್ತುತ ಕೇ. ಕ. ಸಾಹಿತ್ಯ ವೇದಿಕೆ. ದ. ಕ. ಜಿಲ್ಲಾ ಸದಸ್ಯರಾಗಿ, ಕಡಲೂರಿನ ಲೇಖಕರು ಬಳಗ ಪುತ್ತೂರು ಇದರ ಕೋಶಧಿಕಾರಿಯಾಗಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top