ಕೆನರಾ ಕಾಲೇಜಿನಲ್ಲಿ ಮಾತೃಭಾಷಾ ದಿನಾಚರಣೆ

Upayuktha
0

ಮಂಗಳೂರು: ಕೆನರಾ ಕಾಲೇಜು ಸಭಾಂಗಣದಲ್ಲಿ ಸೋಮವಾರ ಇಲ್ಲಿನ ಕನ್ನಡ, ತುಳು, ಕೊಂಕಣಿ ಭಾಷಾ ಸಂಘಗಳ ಸಹಯೋಗದಲ್ಲಿ 'ಮಾತೃ ಭಾಷಾ ದಿನ'ವನ್ನು ಸೋಮವಾರ (ಫೆ. 21) ಆಚರಿಸಲಾಯಿತು.


ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ದೇವದಾಸ ಪೈ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪುಸ್ತಕ ಸಂಸ್ಕೃತಿ ಮರೆಯ ಅಂಚಿಗೆ ಸರಿದಾಗ ತಂತ್ರಜ್ಞಾನದ ಮೂಲಕ ಭಾಷೆಗಳನ್ನು ಉಳಿಸುವ ಕೆಲಸ ಆಗಬೇಕು. ಟೆಕ್ನಾಲಜಿ ಬಗ್ಗೆ ನಮ್ಮ ಮನಸ್ಸನ್ನು ತೆರೆದಿಡಬೇಕು. ಇದರಿಂದ ಭಾಷೆ ಸಬಲ ಹಾಗೂ ಶಾಶ್ವತವಾಗುತ್ತದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಆಡುಮಾತಿನ ವಿಚಾರ ಕಲ್ಪನೆ ಮಾಡಲು ಸಾಧ್ಯವಿಲ್ಲ. 'ಅಪ್ಪೆ ಭಾಷೆ' ಹೃದಯ ತಟ್ಟುತ್ತದೆ. ಕಲಿತ ಭಾಷೆ ಬುದ್ಧಿಗೆ ಮುಟ್ಟುತ್ತದೆ. ಭಾಷೆ-ಸಂಸತಿ ಜತೆಯಲ್ಲೇ ಇರುವಂತದ್ದು. ಸುಮಾರು 600 ಭಾಷೆಗಳು ಇಂದು ಅಪಾಯದ ಅಂಚಿನಲ್ಲಿವೆ ಎಂದರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ, ಭಾಷೆಯ ಜತೆಗೆ ಸಂಸ್ಕತಿ ಆಚಾರ, ವಿಚಾರಗಳು ಇವೆ. ಭಾಷೆ ಉಳಿಯಬೇಕಾದರೆ ನಾವು ಅದನ್ನು ಪ್ರೀತಿಸಬೇಕು. ಭಾಷೆಯನ್ನು ಇನ್ನಷ್ಟು ತಂತ್ರe್ಞÁನಕ್ಕೆ ಹೊಂದಿಸಿಕೊಳ್ಳಬೇಕು. ಆಗ ಕನ್ನಡ ಅನ್ನದ ಭಾಷೆಯಾಗಲು ಸಾಧ್ಯ ಎಂದರು.


ಕೆನರಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರೇಮಲತಾ ವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯನ್ನು ಉಪಯೋಗಿಸಿದಾಗ ಉಳಿದು ಬೆಳೆಯುತ್ತದೆ. ಭಾಷೆಯನ್ನು ಪರಸ್ಪರ ಹೋಲಿಸುವುದು ಸಲ್ಲದು ಎಂದರು. ಕಾಲೇಜಿನ ತುಳು ಸಂಘದ ಸಂಚಾಲಕಿ ಸವಿತಾ, ಕನ್ನಡ ಸಂಘದ ಸಂಚಾಲಕಿ ಶೈಲಜಾ ಪುದುಕೋಳಿ, ಕೊಂಕಣಿ ಸಂಘದ ಸಂಚಾಲಕಿ ಅದಿತಿ ನಾಯಕ್ ಉಪಸ್ಥಿತರಿದ್ದರು.


ವಿದ್ಯಾರ್ಥಿ ಶ್ರೀವತ್ಸ ಸೋಮಯಾಜಿ ಪ್ರಾರ್ಥಿಸಿ, ಸಮೃದ್ಧಿ ಭಟ್, ಸ್ವಾಗತಿಸಿದರು. ಪಲ್ಲವಿ ಶಾಸ್ತ್ರಿ ವಂದಿಸಿ,  ಶೈತಪ್ರಿಯ ನಿರೂಪಿಸಿದರು. ಸುದೀಕ್ಷಾ ಹಾಗೂ ಶ್ವೇತಾ ಕಾಮತ್ ಅವರಿಂದ ಗೀತಾ ಗಾಯನ ನಡೆಯಿತು.

free website counter


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top