ಮಂಗಳೂರು ಸ್ಮಾರ್ಟ್‌ ಸಿಟಿ: ಸ್ಮಾರ್ಟ್ ನಗರಕ್ಕೆ ಬರಲಿದೆ ಸ್ಮಾರ್ಟ್‌ ರಸ್ತೆ

Upayuktha
0

ಪಂಪ್‌ವೆಲ್‌ನಿಂದ ಪಡೀಲ್ ತನಕ ಕಾಮಗಾರಿಗೆ ಫೆ.13ರಂದು (ನಾಳೆ) ಚಾಲನೆ



ಮಂಗಳೂರು: ಮಂಗಳೂರು ಸ್ಮಾರ್ಟ್‌ ಸಿಟಿಯ ಸ್ಮಾರ್ಟ್ ರಸ್ತೆ ಕಾಮಗಾರಿಗೆ ಫೆ.13ರಂದು ಭಾನುವಾರ ಚಾಲನೆ ನೀಡಲಾಗುತ್ತಿದೆ. ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌-5ರ ಅಡಿಯಲ್ಲಿ ಪಂಪ್‌ವೆಲ್‌ನಿಂದ ಪಡೀಲ್‌ ತನಕ 2,800 ಮೀಟರ್‌ ಉದ್ದ ಹಾಗೂ 24. ಮೀ ಅಗಲದ ಚತುಷ್ಪಥ ಕಾಂಕ್ರೀಟ್ ಸ್ಮಾರ್ಟ್‌ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.

ಭಾನುವಾರ ಸಂಜೆ 4 ಗಂಟೆಗೆ ಕಪಿತಾನಿಯೋ ಶಾಲೆಯ ಸಮೀಪ ಈ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಕಾಮಗಾರಿಗೆ 26 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸುವಲ್ಲಿ ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ವೇದವ್ಯಾಸ ಕಾಮತ್ ಅವರಿಗೆ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್‌ಗಳಾದ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ ಮತ್ತು ಸಂದೀಪ್ ಗರೋಡಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.


ಮಂಗಳೂರು ನಗರದ 48 ಕಂಕನಾಡಿ ವೆಲೆನ್ಸಿಯಾ, 49 ಕಂಕನಾಡಿ, 50 ಅಳಪೆ-ದಕ್ಷಿಣ, 51 ಅಳಪೆ ಉತ್ತರ ವಾರ್ಡಿನ ಪಂಪ್‌ವೆಲ್-ಪಡೀಲ್ ರಸ್ತೆಯು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು. ಸದ್ರಿ ರಸ್ತೆಯು 10 ಮೀ ಅಗಲ ಡಾಮರೀಕರಿಸಿದ ರಸ್ತೆಯಾಗಿರುತ್ತದೆ. ಈ ರಸ್ತೆಯನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 24 ಮೀ ಅಗಲ ಕಾಂಕ್ರೀಟ್ ರಸ್ತೆಯಾಗಿ ಪ್ಯಾಕೇಜ್-5ರ ಅಡಿಯಲ್ಲಿ ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.


ಪ್ರಸ್ತಾಪಿತ ರಸ್ತೆಯನ್ನು ಪಂಪ್‌ವೆಲ್-ಪಡೀಲ್-2800 ಮೀ ಉದ್ದಕ್ಕೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸ್ತಾವಿತ ರಸ್ತೆಯು ೨೪ಮೀ ಅಗಲವಿರುತ್ತದೆ, ಸದ್ರಿ ರಸ್ತೆಯಲ್ಲಿ 3.50 ಮೀಟರ್ ಅಗಲದ 4 ಲೇನ್ ಕಾಂಕ್ರೀಟ್‌ವೇ, ರಸ್ತೆಯ ಇಕ್ಕೆಲಗಳಲ್ಲಿ 3 ಮೀಟರ್ ಅಗಲದ ಇಂಟರ್‌ಲಾಕ್ ಅಳವಡಿಸಲಾಗುವುದು. ಹಾಗೂ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಳೆನೀರು ಚರಂಡಿ, ಯುಟಿಲಿಟಿ ಡಕ್ಟ್, ಪಾದಚಾರಿಗಳ ಮಾರ್ಗವನ್ನು ಹಾಗೂ ರಸ್ತೆಯ ಮಧ್ಯಭಾಗದಲ್ಲಿ ಮೀಡಿಯನ್ ಜೊತೆ ವಿದ್ಯುತ್ ದಾರಿದೀಪ ಅಳವಡಿಕೆ ನಿರ್ಮಿಸಲಾಗುವುದು. ಈ ರಸ್ತೆಯನ್ನು ಒಟ್ಟು ರೂ. 26.00 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿಯ ಗುತ್ತಿಗೆಯನ್ನು ಮಂಗಳೂರಿನ ಶ್ರೀ ಡಿ. ಸುಧಾಕರ್ ಶೆಟ್ಟಿ, ಮೇ|| ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಾವೂರು ಇವರಿಗೆ ನೀಡಲಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top