ಭಾರತದ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ 'ನೈಟಿಂಗೇಲ್' ಲತಾ ಮಂಗೇಶ್ಕರ್‌

Upayuktha
0

ಗಾನಲೀನ ಗಾಯಕಿಗೆ ನುಡಿನಮನ


ಸಂಗೀತ ಲೋಕದ ದಂತಕತೆ ತಮ್ಮ ಮಧುರವಾದ ಕಂಠದಿಂದ ಸುಮಾರು ಏಳು ದಶಕಗಳ ಕಾಲ ಭಾರತವನ್ನಾಳಿದ ಧ್ವನಿ ದೇವತೆ ಲತಾಮಂಗೇಶ್ಕರ್ ಅವರು ಮಧ್ಯಪ್ರದೇಶದ ಇಂದೋರ್ ಎಂಬಲ್ಲಿ 1929 ಸೆಪ್ಟೆಂಬರ್ 28 ರಂದು ದೀನಾನಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ದಂಪತಿಗಳ ಪುತ್ರಿಯಾಗಿ ಜನಿಸಿದರು. ಶಾಸ್ತ್ರೀಯಸಂಗೀತ ಕುಟುಂಬದಲ್ಲಿ ಜನಿಸಿದ ಇವರು ತನ್ನ ಎಳೆಯ ವಯಸ್ಸಿನಲ್ಲಿ ತಂಬೂರಿ ಹಿಡಿದು ತನಗೆ ತಾನೇ ಸಂಗೀತ ಶಕ್ತಿಯಾದವರು.


ಲತಾ ಮಂಗೇಶ್ಕರ್ ಅವರು ತನ್ನ ಹದಿಮೂರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ಮನೆಯ ಹಿರಿಯ ಮಗಳಾಗಿ ಮನೆ ಜವಾಬ್ದಾರಿಯನ್ನು ನಿಭಾಯಿಸುದಕ್ಕಾಗಿ ತನ್ನನ್ನು ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ತೆಗೆಸಿಕೊಂಡರು. ತನ್ನ ಕಿರಿಯ ವಯಸ್ಸಿನಲ್ಲೇ ವೃತ್ತಿಜೀವನವನ್ನು ಆರಂಭಿಸಿದ ಇವರಿಗೆ ಮೊದಮೊದಲು ಲತಾಮಂಗೇಶ್ಕರ್ ಅವರದ್ದು ಸಪೂರ ದ್ವನಿಯೆಂದು ಹಲವು ಕಡೆ ಸಿನಿಮಾದಲ್ಲಿ ಹಾಡುವ ಅವಕಾಶದಿಂದ ವಂಚಿತರಾದರು. ನಂತರ 1949 ರಲ್ಲಿ ಬಿಡುಗಡೆಯಾದ ಮಹಲ್ ಚಿತ್ರದ ಆಯೇಗ ಅನೇವಾಲ ಎಂಬ ಇವರ ಗೀತೆಯು ಅವರ ವೃತ್ತಿ ಜೀವನಕ್ಕೆ ಹೊಸ ತಿರುವನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಹಲವಾರು ಸೂಪರ್ ಹಿಟ್ ಸಾಂಗ್ ಗಳಿಗೆ ಧ್ವನಿಯಾದರು. ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಲತಾ ಮಂಗೇಶ್ಕರ್ ಅವರು ಹಾಡಿದ ಎಲ್ಲಾ ಹಾಡುಗಳು ಹಿಟ್ ಅಗತೊಡಗಿದವು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಕನ್ನಡ ಚಿತ್ರದಲ್ಲಿ "ಬೆಳ್ಳನೆ ಬೆಳಗಾಯಿತು" ಮತ್ತು "ಎಲ್ಲರೇ ಇರುತ್ತೀರೋ ಎಂದರೇ ಬರುತ್ತಿರೋ" ಎಂಬ ಹಾಡುಗಳನ್ನು ಕೂಡ ಹಾಡಿದ್ದಾರೆ. ಈ ಹಾಡುಗಳು ಅವರ ಯಶಸ್ಸಿನ ಹಾದಿಗೆ ಮತ್ತಷ್ಟು ಹುಮ್ಮಸ್ಸನ್ನು ನೀಡಿತ್ತು. ಭಾರತದ ನೈಟಿಂಗೆಲ್ ಎಂದು ಕರೆಯಲ್ಪಡುವ ಅದ್ಭುತ ಕಂಠದ ಗಾಯಕಿ ಲತಾಮಂಗೇಶ್ಕರ್ ಅವರು 36 ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಸಾಧನೆ ಇವರದು. ಇತರರಿಗೆ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದ ಮಂಗೇಶ್ಕರ್ ಅವರು 2019 ರಲ್ಲಿ ಮಹಾರಾಷ್ಟ್ರದಲ್ಲಾದ ನೆರೆ ಪರಿಹಾರಕ್ಕಾಗಿ ಧನಸಹಾಯವನ್ನೂ ಮಾಡಿದರು. ಇವರು ಕೇವಲ ಗಾಯಕಿ ಮಾತ್ರ ಆಗಿರದೆ, ಚಲನಚಿತ್ರ ನಿರ್ದೇಶಕಿಯೂ ಆಗಿದ್ದರು. 1955 ರಲ್ಲಿ ಮತ್ತು 1990 ರಲ್ಲಿ ಹಿಂದಿ ಭಾಷೆಯಲ್ಲಿ" ಕಾಂಚನ್" ಗಂಗಾ ಹಾಗೂ "ಲೇಕಿನ್" ಚಿತ್ರಗಳನ್ನು ನಿರ್ಮಿಸಿದ್ದಾರೆ. ಲತ ಮಂಗೇಶ್ಕರ್ ರಾಮ ರಾಮ ಪಾವನ ಎಂಬ ಸಂಗೀತ ನಿರ್ದೇಶನ ಮಾಡುವುದರ ಮುಖೇನ ಉತ್ತಮ ಸಂಗೀತ ನಿರ್ದೇಶಕಿಯಾಗಿ ಮಿಂಚಿದ್ದಾರೆ .1963 ರಲ್ಲಿ ನಡೆದ ಭಾರತ-ಚೀನಾ ಇದರ ಸಂದರ್ಭದಲ್ಲಿ ಮಂಗೇಶ್ಕರ್ ಅವರು "ಏ ಮೇರೆ ವತನ್ ಕೆ ಲೋಗೋ" ಎಂಬ  ದೇಶಭಕ್ತಿ ಗೀತೆಯನ್ನು ಹಾಡಿದರು. ಈ ಹಾಡು ಮಾಜಿಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಕಣ್ಣೀರು ತರಿಸಿತು.ಪರಿಚಯ್ ಚಿತ್ರದ "ಬೀಟಿ ನಾ ಬಿಟೈ" ಹಾಡಿಗಾಗಿ 1973 ರಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.  ತನ್ನ ಅದ್ಭುತ ಗಾಯನದ ಮೂಲಕ ಸಾಧನೆಯ  ಶಿಖರವೇರಿದ ಇವರಿಗೆ ಅದೆಷ್ಟೋ ಪ್ರಶಸ್ತಿಗಳು ಅರಸಿ ಬಂದಿವೆ. ಲತಾ ಮಂಗೇಶ್ಕರ್ ಅವರಿಗೆ 1969 ರಲ್ಲಿ ಪದ್ಮಭೂಷಣ ಪ್ರಶಸ್ತಿ, 1989 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 1999 ರಲ್ಲಿ  ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ,2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವದ ಭಾರತ ರತ್ನ ಪ್ರಶಸ್ತಿಯನ್ನೂ ಪಡೆದರು.


ಹಲವು ದಶಕಗಳಿಂದ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ ಲತಾ ಮಂಗೇಶ್ಕರ್ ಅಸೌಖ್ಯದಿಂದ ಅಸುನೀಗಿರುತ್ತಾರೆ. ಇದು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ.

ಸಂದೀಪ್.ಎಸ್. ಮಂಚಿಕಟ್ಟೆ

ತೃತೀಯ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top