ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ನೂತನ ಗರ್ಭಗುಡಿಗೆ ಪಾದುಕಾನ್ಯಾಸ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ
ಮಂಗಳೂರು: ಮಂಗಳೂರಿನ ಕುಲಶೇಖರದ ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಕಾರ್ಯವು ರಮೇಶ ಕಾರಂತ ಬೆದ್ರಡ್ಕ ಇವರ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗುತ್ತಿರುವ ನೂತನ ಗರ್ಭಗುಡಿಯ ಕಾರ್ಯವು ಭರದಿಂದ ಸಾಗುತ್ತಿದ್ದು ಫೆಬ್ರವರಿ 16ಯಂದು ರಾತ್ರಿ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯ ವಾಮಂಜೂರು ಅವರ ಪೌರೋಹಿತ್ಯದಲ್ಲಿ ಇಷ್ಟಿಕಾನ್ಯಾಸ- ಗರ್ಭನ್ಯಾಸ ನಡೆಯಿತು.
ಫೆ17ರಂದು ಗುರುವಾರದಂದು ಬೆಳಿಗ್ಗೆ ಶ್ರೀ ಕ್ಷೇತ್ರದ ಗರ್ಭಗುಡಿಯ ಪಾದುಕಾನ್ಯಾಸ ವಿವಿಧ ಧಾರ್ಮಿಕ ವಿಧಿ ವಿಧಾನದ ಮೂಲಕ ಅಪಾರ ಭಕ್ತರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಕ್ಷೇತ್ರ ಮಾಣಿಲದ ಕರ್ಮಯೋಗಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಶ್ರದ್ಧೆ ಮತ್ತು ಭಕ್ತಿಯಿಂದ ಜೀರ್ಣೋದ್ಧಾರ ಕಾರ್ಯವನ್ನು ಮಾಡೋಣ, ದೇವಸ್ಥಾನ ಜೀರ್ಣೋದ್ಧಾರ ಗೊಂಡಾಗ ಊರು ಅಭಿವೃದ್ಧಿಗೊಳ್ಳುತ್ತದೆ, ಸೇವಾಕಾರ್ಯಗಳು ಒಗ್ಗಟ್ಟಿನಿಂದ ನಡೆಯಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾಮೋದರ್, ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್, ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಪ್ರಧಾನ ಸಂಚಾಲಕ ಸುರೇಶ್ ಕುಲಾಲ್ ಮಂಗಳಾದೇವಿ, ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್ ಉಪ ಕಾರ್ಯಧ್ಯಕ್ಷ ಪಾರ್ವತಿ ಶಕ್ತಿನಗರ, ಜಿಲ್ಲಾ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಸೇವಾದಳದ ದಳಪತಿ ಕಿರಣ್ ಅಟ್ಲೂರು ಹಾಗೂ, ಎಂಪಿ ಬಂಗೇರ, ಕುಶಾಲಪ್ಪ, ಪುಂಡರೀಕಾಕ್ಷ, ನ್ಯಾಯವಾದಿ ರವೀಂದ್ರ ಮುನ್ನಿಪಾಡಿ, ಗಿರಿಧರ್ ಜೆ ಮೂಲ್ಯ, ಬಿಜೆಪಿ ನಾಯಕಿ ರೂಪಾ ಡಿ ಬಂಗೇರ, ಉದ್ಯಮಿ ಅನಿಲ್ ದಾಸ್, ಸುಲೋಚನಾ ಕೋಡಿಕಲ್, ಜೋಶ್ನಾ ಗೋಪಾಲ್, ಸದಾಶಿವ ಬಿಜೈ, ಶಿವಪ್ಪ ನಂತೂರು, ಧೂಮಪ್ಪ ಮಂದಾರ ಬೈಲ್, ಅಶೋಕ್ ಕೂಲೂರು, ಇಂಜಿನಿಯರ್ ನರೇಂದ್ರ ಪ್ರಭು, ಗರ್ಭಗುಡಿಯ ಶಿಲ್ಪಿ ಹರೀಶ್ ರಾಯಿ, ದೇವಸ್ಥಾನದ ಟ್ರಸ್ಟಿಗಳು, ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ