ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. 


ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಯೋಜನೆ, ಪರೀಕ್ಷಾ ಪೂರ್ವ ತಯಾರಿ ಮತ್ತು ನಿರ್ವಹಣೆ, ವಸ್ತ್ರ ಸಂಹಿತೆ, ಆರೋಗ್ಯ ಜಾಗೃತಿ ಮತ್ತು ನಿರ್ವಹಣೆ, ಹದಿಹರೆಯದ ಬದಲಾವಣೆಗಳು ಮತ್ತು ಅದರ ಬಗ್ಗೆ ಅರಿವು, ಮಾದಕದ್ರವ್ಯ ಹಾಗೂ ವ್ಯಸನದ ಬಗ್ಗೆ ಜಾಗೃತಿ, ಸಮಾಜದಲ್ಲಿ ಗೌರವಯುತವಾದ ನಡವಳಿಕೆಗಳ ಕುರಿತು ಸಲಹೆ ಹಾಗೆಯೇ ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತಿಯನ್ನು ಉಂಟು ಮಾಡಲಾಯಿತು.  


ಪ್ರಾಚಾರ್ಯರಾದ ಪ್ರೊ ದಿನೇಶ್ ಚೌಟ ಇವರ ನೇತ್ರತ್ವದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸದಸ್ಯರಾದ ಡಾ ರಾಜೇಶ್ವರಿ ಕೆ. ಆರ್, ಸವಿತಾ, ಸುನಿಲ್ ಪಿ.ಜೆ, ಚೇತನ ಕುಮಾರಿ, ರಾಜು ಎ.ಎ, ಮಹಾವೀರ ಜೈನ್ ಹಾಗೂ ಇತರ ಉಪನ್ಯಾಸಕರು ಕಾರ್ಯಾಗಾರ ನಡೆಸಲು ಸಹಕರಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
To Top