ಕಾಸರಗೋಡು: ಕಾಸರಗೋಡು ಹವ್ಯಕ ಭಾರತೀ ಸೇವಾ ಟ್ರಸ್ಟ್ ನ ಹಿರಿಯ ಸದಸ್ಯರೂ, ನಿವೃತ್ತ ಮುಖ್ಯಾಧ್ಯಾಪಕರೂ, ಭಾಷಾಂತರಕಾರರೂ, ಸಾಹಿತಿಯೂ, ವಿದ್ವಾಂಸರೂ ಆದ ಶ್ರೀ ಅಡ್ಯನಡ್ಕ ನರಸಿಂಹ ಭಟ್ಟರ ನಿಧನಕ್ಕೆ ಟ್ರಸ್ಟ್ ನ ಅಧ್ಯಕ್ಷರಾದ ಡಾ. ವೆಂಕಟಗಿರಿ, ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ್, ಡಾ. ಗಣಪತಿ ಭಟ್ ಕುಳಮರ್ವ, ತೆಕ್ಕೇಕೆರೆ ಶಂಕರ ನಾರಾಯಣ ಭಟ್, ಎಸ್ ವಿ ಭಟ್, ಎಸ್ ಜೆ ಪ್ರಸಾದ್ ಮುಂತಾದವರು ಗಾಢ ಶೋಕ ವ್ಯಕ್ತಪಡಿಸಿದ್ದಾರೆ.
ಫೆ.25ರಂದು ಶುಕ್ರವಾರ ಸಾಯಂಕಾಲ 5 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿ ಬದಿಬಾಗಿಲಿನಲ್ಲಿ ಇರುವ ಹವ್ಯಕ ಸಭಾ ಭವನದಲ್ಲಿ ಶೋಕ ಸಭೆ ನಡೆಸಿ ಮೃತರ ಆತ್ಮ ಸದ್ಗತಿಗಾಗಿ ಪ್ರಾರ್ಥಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ವೆಂಕಟಗಿರಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರೂ ಶ್ರೀ ನರಸಿಂಹ ಭಟ್ಟರ ಅಭಿಮಾನಿಗಳೂ ಭಾಗವಹಿಸಲು ಕೋರಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ