ಮಂಗಳೂರು: ಭಾರತ ಸ್ವಾತಂತ್ರ್ಯದ ಪ್ರಪ್ರಥಮ ಮಹಿಳಾ ಸೇನಾನಿ ಉಳ್ಳಾಲ ವೀರರಾಣಿ ಅಬ್ಬಕ್ಕನ ನೆನಪಿಗಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ 'ನಮ್ಮ ಅಬ್ಬಕ್ಕ- 2022 ಅಮೃತ ಸ್ವಾತಂತ್ರ್ಯ ಸಂಭ್ರಮ'ವನ್ನು 2022 ಫೆ. 26 - 27 ರಂದು ಮಂಗಳೂರು ಪುರಭವನದಲ್ಲಿ ಏರ್ಪಡಿಸಲಾಗಿದೆ. ಈ ಸಂಬಂಧ ಮಂಗಳೂರು ಮಹಾನಗರ ಪಾಲಿಕೆಯು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಎರಡು ದಿನಗಳ ಸಾಂಸ್ಕೃತಿಕ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಮೂಹ ದೇಶಭಕ್ತಿ ಗೀತೆ:
ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಿದೆ. ಆಸಕ್ತರು ಕಾಲೇಜಿನ ಗುರುತು ಚೀಟಿಯೊಂದಿಗೆ ಭಾಗವಹಿಸುವುದು. (ತಂಡದಲ್ಲಿ ಹಿನ್ನೆಲೆ ಸೇರಿ 10 ಮಂದಿಗೆ ಅವಕಾಶ. ಸಮಯ 4+1 ನಿಮಿಷ) ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ (8000+5000+3000) ನೀಡಲಾಗುವುದು.
ಮುಕ್ತ ಭಾಷಣ ಸ್ಪರ್ಧೆ:
ಸಾರ್ವಜನಿಕರಿಗಾಗಿ 'ಭಾರತ ಸ್ವಾತಂತ್ರ್ಯದ ಅಮೃತೋತ್ಸವ: ರಾಣಿ ಅಬ್ಬಕ್ಕನ ನೆನಹು' ವಿಷಯವಾಗಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆ ಮುಕ್ತವಾಗಿದ್ದು ವಯಸ್ಸಿನ ಮಿತಿ ಇರುವುದಿಲ್ಲ. ವಿಜೇತರಿಗೆ (5000+3000+2000) ನಗದು ಬಹುಮಾನವಿದೆ.
ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಫೆ.27 ರ ಭಾನುವಾರ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನಗಳನ್ನು ವಿತರಿಸಲಾಗುವುದು. ಅಲ್ಲದೆ ವೇದಿಕೆಯ ಮೇಲೆ ಪ್ರದರ್ಶನಕ್ಕೂ ಅವಕಾಶ ನೀಡಲಾಗುವುದು.
ಸ್ಪರ್ಧಿಗಳ ಗಮನಕ್ಕೆ:
ಸಮೂಹ ದೇಶಭಕ್ತಿ ಗೀತಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ.ಪೂ.ಕಾಲೇಜು ವಿದ್ಯಾರ್ಥಿಗಳು ಮತ್ತು ಭಾಷಣ ಸ್ಪರ್ಧೆಯಲ್ಲಿ ಆಸಕ್ತ ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಪತ್ರ ಮುಖೇನ ಕೆಳಗಿನ ವಿಳಾಸದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ. ಫೆಬ್ರವರಿ 26 ರಂದು ಶನಿವಾರ ಪೂರ್ವಾಹ್ನ ಗಂ.9.00 ರಿಂದ ಮಂಗಳೂರು ಪುರಭವನದಲ್ಲಿ ಸ್ಪರ್ಧೆ ಜರಗಲಿದೆ. ನಿರೀಕ್ಷಿತ ಪ್ರವೇಶಗಳು ಬಾರದಿದ್ದಲ್ಲಿ ಸ್ಥಳದಲ್ಲೇ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಳಾಸ: ಸಂಚಾಲಕರು, ಸ್ಪರ್ಧಾ ವಿಭಾಗ 'ನಮ್ಮ ಅಬ್ಬಕ್ಕ - 2022' ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ 'ವಿದ್ಯಾ' ಕದ್ರಿಕಂಬಳ; ಬಿಜೈ ಅಂಚೆ, ಮಂಗಳೂರು - 575004
ಇಮೈಲ್: thyagam.harekala@gmail.com
ದೂರವಾಣಿ: 8904842924; 8660935087
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ