ಉಜಿರೆ: ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ 2020-21ನೇ ಸಾಲಿನ ವಾರ್ಷಿಕ ಸಂಚಿಕೆ ಮನೀಷಾ ಸೋಮವಾರ ಲೋಕಾರ್ಪಣೆಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ಹೆಗ್ಗಡೆ ಅವರು ತಮ್ಮ ಶುಭನುಡಿಯ ಹಸ್ತಾಕ್ಷರಗಳೊಂದಿಗೆ ಪುಸ್ತಕ ಬಿಡುಗಡೆಗೊಳಿಸಿದರು.
ಎಸ್. ಡಿ. ಎಂ ವಿದ್ಯಾರ್ಥಿಗಳಿಂದಲೇ ರೂಪಗೊಂಡಿರುವ ಈ ವಾರ್ಷಿಕ ಸಂಚಿಕೆ ಹಲವು ಬರಹಗಳ ಗುಚ್ಛವಾಗಿದೆ. ವಿದ್ಯಾರ್ಥಿಗಳಲ್ಲಿನ ಬರವಣಿಗೆಯಕೌಶಲ್ಯವನ್ನು ವೃದ್ಧಿಸುವ ಸಲುವಾಗಿ ಮತ್ತು ವಿದ್ಯಾರ್ಥಿಗಳ ಬರಹಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರತೀ ವರ್ಷ ಮನಿಷಾ ವಾರ್ಷಿಕ ಸಂಚಿಕೆಯನ್ನು ರೂಪಿಸಲಾಗುತ್ತಿದೆ.
ಸಂಚಿಕೆಯ ಬಿಡುಗಡೆ ಸಂದರ್ಭದಲ್ಲಿಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್. ಉದಯಚಂದ್ರ, ಪ್ರಾಧ್ಯಾಪಕ ಡಾ.ಸಂಪತ್‌ಕುಮಾರ್, ಡಾ. ಶ್ರೀನಿವಾಸ, ಸಂಪಾದಕ ಮಂಡಳಿಯ ಕಾರ್ಯನಿರ್ವಾಹಕ ಸಂಪಾದಕ ಡಾ.ರಾಮಚಂದ್ರ ಪುರೋಹಿತ್, ಪ್ರಾಧ್ಯಾಪಕರಾದ ಡಾ.ರಾಜಶೇಖರ ಹಳೆಮನೆ, ಡಾ.ಎನ್.ಕೆ. ಪದ್ಮನಾಭ ಮತ್ತು ವಿದ್ಯಾರ್ಥಿಗಳಾದ ಮಧುರಾ ಭಟ್ಟ, ಹರ್ಷಿತಾ ಹೆಬ್ಬಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ