ಆಳ್ವಾಸ್‌ನಲ್ಲಿ ರಕ್ತದಾನ ಶಿಬಿರ; 'ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ 2020-21' - ಆಳ್ವಾಸ್

Upayuktha
1 minute read
0

ರಕ್ತದಾನ ಮಾಡುವವರ ಸಂಖ್ಯೆ ದ್ವಿಗುಣವಾಗಲಿ: ಡಾ ಶರತ್ ಕುಮಾರ್ ರಾವ್ ಜೆ.


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿ ಭೂದಳ ಹಾಗೂ ಎನ್‌ಎಸ್‌ಎಸ್ ಘಟಕವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಆಳ್ವಾಸ್ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಕಾಲೇಜಿನ ಕಾಮರ್ಸ್ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.


ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಶರತ್ ಕುಮಾರ್ ರಾವ್ ಜೆ. ಮಾತನಾಡಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮನಸ್ಥಿತಿಯುಳ್ಳವರಿಂದಾಗಿ ಸಮಾಜದಲ್ಲಿಂದು ತುರ್ತು ರಕ್ತ ಅನಿವರ‍್ಯವಾದಾಗ ಸೂಕ್ತ ಸಮಯದಲ್ಲಿ ರಕ್ತದ ಪೂರೈಕೆ ಸಾದ್ಯವಾಗುತ್ತಿದೆ. ಇಂತಹವರ ಸಂಖ್ಯೆ ಸಮಾಜದಲ್ಲಿ ದ್ವಿಗುಣವಾಗುತ್ತಾ ಸಾಗಲಿ ಎಂದರು.


ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಮಾಜದಲ್ಲಿ ನಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದರೆ ನಾವು ವಾಸಿಸುವ ಪರಿಸರಕ್ಕೆ ನಾವೆಷ್ಟು ಕೊಡುಗೆ ನೀಡಿದ್ದೇವೆ ಎಂಬುದನ್ನು ಅವಲಂಭಿಸಿರುತ್ತದೆಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಮಾಡಿದ ಕೆಲಸಗಳಿಂದಲ್ಲಾ ಎಂದರು.


'ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ 2020-21' - ಆಳ್ವಾಸ್


ಕೋವಿಡ್ ಸಂಧರ್ಭದಲ್ಲಿ ಅತೀ ಹೆಚ್ಚು ಭಾರಿ ರಕ್ತದಾನ ಶಿಬಿರಗಳನ್ನು ನಡೆಸುವುದರೊಂದಿಗೆ, ವರ್ಷವಿಡೀ ಕಾಲೇಜಿನಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ ಹಿನ್ನಲೆಯಲ್ಲಿ ಆಳ್ವಾಸ್ ಕಾಲೇಜನ್ನು 'ಬೆಸ್ಟ್ ಬ್ಲಡ್ ಡೋನರ್ ಇನ್ಸ್ಟಿಟ್ಯೂಷನ್ 2020-21' ಎಂದು ಘೋಷಿಸಲಾಯಿತು.


ಶಿಬಿರದಲ್ಲಿ ಉಪನ್ಯಾಸಕರೂ ಸೇರಿದಂತೆ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಒಟ್ಟು 296 ಯೂನಿಟ್ ರಕ್ತ ಸಂಗ್ರಹವಾಯಿತು.


ಕಾರ‍್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಎನ್‌ಸಿ ಸಿ ಭೂಸೇನಾದಳದ ಅಧಿಕಾರಿ ಕ್ಯಾಪ್ಟನ್ ಡಾ ರಾಜೇಶ್ ಬಿ, ಎನ್.ಎಸ್.ಎಸ್ ಘಟಕದ ಸಂಯೋಜಕ ವಸಂತ ಎ ಉಪಸ್ಥಿತರಿದ್ದರು. ಎನ್‌ಸಿ ಸಿ ಕೆಡೆಟ್‌ಗಳಾದ ಅಮೃತ ನಿರೂಪಿಸಿ, ನಯನ ಸ್ವಾಗತಿಸಿ, ಪುನೀತ್ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top