ಮಿಜಾರು: ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗದಿಂದ ಡಿಜಿಟಲ್ ಬ್ರಾಂಡಿಂಗ್ ಮತ್ತು ಪಬ್ಲಿಕ್ ರಿಲೇಶನ್ ಕಾರ್ಯಾಗಾರವನ್ನು ಮಿಜಾರು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಯಿತು. ಬೆಂಗಳೂರಿನ ಆದ್ಯಾ ಕಮ್ಯುನಿಕೇಶನ್ಸ್‍ನ ಸಂಸ್ಥಾಪಕ ಚೆಂಗಪ್ಪ ಎ.ಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವ್ಯವಹಾರಿಕ ಜಗತ್ತಿಗೆ ಅಂರ್ತಜಾಲ ಹಾಗೂ ಸಾಮಾಜಿಕ ಜಾಲತಾಣಗಳ ಸದ್ಭಳಿಕೆ, ಪ್ರಾಮುಖ್ಯತೆಯ ಕುರಿತಾಗಿ ಮತ್ತು ಸಾರ್ವಜನಿಕ ಸಂಪರ್ಕ ಮತ್ತು ಪರಿಣಾಮಕಾರಿ ಸಂವಹನ ಕುರಿತಾಗಿ ಉಪನ್ಯಾಸ ನೀಡಿದರು.
ಸಹಕಾರಿ ಸಂವಹನ, ಬ್ರಾಂಡಿಂಗ್ ಮತ್ತು ಪರಿಣಾಮಕಾರಿ ಸಂವಹನವು ಜಾಹಿರಾತುಗಳ ಆದಾಯ ಹೆಚ್ಚಳಕ್ಕೆ ಮೂಲವಾಗಿವೆ ಎಂದು ಹೇಳಿದರು. ಕೋವಿಡ್-19 ಹಾಗೂ ಲಾಕ್ ಡೌನ್ ಪರಿಣಾಮದಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನ್ಲೈನ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‍ಗಳ ವ್ಯವಹಾರಗಳ ಲಾಭಾಂಶದ ಕುರಿತಾಗಿ ಹಾಗೂ ವಿದ್ಯಾರ್ಥಿಗಳಿಗೆ ಡಿಜಿಟಲ್ ಬ್ರಾಂಡಿಂಗ್‍ನ ಕ್ರಿಯಾಶೀಲತೆಯ ಕುರಿತು ತಿಳಿಸಿದರು. ಹಾಗೂ ಇಂದಿನ ವ್ಯವಹಾರದ ವಹಿವಾಟಿನಲ್ಲಿ ಪಬ್ಲಿಕ್ ರಿಲೇಶನ್, ಹಾಗೂ ಬ್ರಾಂಡಿಗ್‍ನ ಮಹತ್ವದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಉದಯ್, ಉಪನ್ಯಾಸಕಿ ರಕ್ಷಿತಾ ತೋಡಾರು, ಪರ್ಚೇಸ್ ಆಫೀಸರ್ ಮೋಹನ್ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿಗಳಾದ ಅಸೀಮಾ ಸ್ವಾಗತಿಸಿ, ಅಕ್ಷಯ್ ವಂದಿಸಿ, ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ