ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಮತ್ತು ಕಲಾ ಸಂಘದ ವತಿಯಿಂದ ರಾಷ್ಟ್ರೀಯ ಯುವದಿನ - 151ನೇ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿ ಶಶಾಂಕ್ ವಿವೇಕಾನಂದರ ಸಾರ್ಥಕತೆ ಹಾಗೂ ಸಾಧನೆಯ ಬದುಕನ್ನು ನೆನೆದು, ರಾಷ್ಟ್ರೀಯತೆಯನ್ನು ಯುವ ಜನರು ಮೈಗೂಡಿಸಬೇಕು ಹಾಗೂ ಯುವ ಜನಾಂಗ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್‌ಗಳಾದ ಪ್ರಶಾಂತ್ ಎಮ್. ಡಿ ಹಾಗೂ ವೇಣುಗೋಪಾಲ್ ಶೆಟ್ಟಿ, ಕಲಾ ಸಂಘದ ಸಂಯೋಜನಾಧಿಕಾರಿಗಳು ಭಾಸ್ಕರ್, ಎನ್.ಎಸ್.ಎಸ್ ಯೋಜನಾಧಿಕಾರಿ ದಾಮೋದರ್, ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡರು. ರಾಜ್ಯಶಾಸ್ತ್ರ ಉಪನ್ಯಾಸಕ ಸುನೀಲ್ ಕಾರ‍್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿ ಬಸವ ಸ್ವರೂಪರವರು ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ