||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಗೀತವು ಮನೋರಂಜನೆ ಜೊತೆ ಆರೋಗ್ಯ ವೃದ್ಧಿಗೂ ಸಹಕಾರಿ

ಸಂಗೀತವು ಮನೋರಂಜನೆ ಜೊತೆ ಆರೋಗ್ಯ ವೃದ್ಧಿಗೂ ಸಹಕಾರಿ

 

ಸಂಗೀತವು ಆಹ್ಲಾದಕರವಾದ ಶಬ್ದಗಳನ್ನು ಸಂಯೋಜಿಸುವ ಕಲೆ. ರಾಗಗಳು ಮತ್ತು ತಾಳಗಳನ್ನು ಬಳಸಿಕೊಂಡು ಸಂಗೀತ ಹಾಡಲು ಅಥವಾ ವಾದ್ಯಗಳನ್ನು ನುಡಿಸಲು ಬಳಸುವ ಮಧುರ ಸಂಯೋಜನೆಯಾಗಿದೆ. ಸಂಗೀತವನ್ನು ಅಭ್ಯಾಸ ಮಾಡುವುದರ ಜೊತೆಗೆ ಸಂಗೀತವನ್ನು ಆಲಿಸುವುದು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಸಂಗೀತವು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ.


ಇದು ದೇಹದಲ್ಲಿ ರಕ್ತ ಪರಿಚಲನೆ (blood circulation) ಸುಧಾರಿಸುತ್ತದೆ. ಸಂಗೀತವು ಒತ್ತಡದ ಹಾರ್ಮೋನುಗಳನ್ನು (ಕಾರ್ಟಿಸೋಲ್) - (stress hormone-cortisol) ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೀಗಾಗಿ ನೋವನ್ನು ಕಡಿಮೆ ಮಾಡುತ್ತದೆ. ಯಾವುದೇ ಸರ್ಜರಿಯ ಮೊದಲು ಸಂಗೀತವನ್ನುಕೇಳುವುದರಿಂದ ಶಸ್ತ್ರಚಿಕಿತ್ಸೆಯ ನಂತರದ ಫಲಿತಾಂಶಗಳನ್ನು (post surgery outcomes) ಸುಧಾರಿಸಬಹುದು ಎಂದು ಅಧ್ಯಯನ ಮಾಡಲಾಗಿದೆ. ಸಂಗೀತವು ನಮ್ಮ ಜೀವನದಲ್ಲಿ ಭಾವನೆಗಳನ್ನು ಅನುಭವಿಸಲು ನಮಗೆ ಅವಕಾಶ ಮಾಡಿಕೊಡುತ್ತದೆ. ಸಂಗೀತವು ಅಗಾಧವಾದ ವೈದ್ಯಕೀಯ ಪ್ರಯೋಜನಗಳನ್ನು ಮತ್ತು ವ್ಯಕ್ತಿಯ ಆರೋಗ್ಯವನ್ನು ಸುದಾರಿಸುತ್ತದೆ ಎಂದು ಸಾಬೀತಾಗಿದೆ.


ಸಂಗೀತ ಚಿಕಿತ್ಸೆ ಎಂದರೇನು?

ಸಂಗೀತ ಚಿಕಿತ್ಸೆಯು ಚಿಕಿತ್ಸಕ ವಿಧಾನವಾಗಿದ್ದು, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಂಗೀತದ  ಗುಣಲಕ್ಷಣಗಳನ್ನು ಬಳಸುವ ಚಿಕಿತ್ಸೆ. ಸಂಗೀತ ಚಿಕಿತ್ಸೆಯು ವ್ಯಕ್ತಿಯ ದೈಹಿಕ, ಭಾವನಾತ್ಮಕ, ಅರಿವಿನ ಮತ್ತು ಸಾಮಾಜಿಕ ಅಗತ್ಯಗಳನ್ನು ಪರಿಹರಿಸಲು ಸಂಗೀತದ ಬಳಕೆ. ಇದು ಮಧುರವಾದ ಹಾಡನ್ನು ಕೇಳುವುದು, ವಾದ್ಯವನ್ನು ನುಡಿಸುವುದು, ಡ್ರಮ್ಮಿಂಗ್, ಹಾಡುಗಳನ್ನು ಬರೆಯುವುದು ಮತ್ತು ಮಾರ್ಗದರ್ಶಿ ಚಿತ್ರಣಗಳಂತಹ (guided imagery) ವಿವಿಧ ಚಟುವಟಿಕೆಗಳನ್ನು ಸಂಗೀತ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.


ಈ ರೀತಿಯ ಚಿಕಿತ್ಸೆಯು ಖಿನ್ನತೆ (depression) ಮತ್ತು ಆತಂಕದಿಂದ (anxiety) ಬಳಲುವ ಜನರಿಗೆ ಸಹಾಯಕವಾಗಬಹುದು ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿರುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಗೀತ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯಲು ಸಂಗೀತದ ಹಿನ್ನೆಲೆ ಅಗತ್ಯವಿಲ್ಲ.


ಸಂಗೀತ ಚಿಕಿತ್ಸೆಯ ವಿವಿಧ ವಿಧಾನ

ಅನಲಿಟಿಕಲ್ ಸಂಗೀತ ಚಿಕಿತ್ಸೆ (analytical music therapy)


ಕಾಂಗ್ನಿಟೀವ್ ಬಿಹೇವಿಯರಲ್ ಸಂಗೀತ ಚಿಕಿತ್ಸೆ (cognitive behavioural music therapy)


ಕಮ್ಯೂನಿಟಿ ಸಂಗೀತ ಚಿಕಿತ್ಸೆ (community music therapy)


ಗೈಡೆಡ್ ಇಮೇಜರಿ (guided imagery technique)


ವೊಕಲ್ ಕೊಥೆರಫಿ (vocal psychotherapy)


ಸಂಗೀತ ಚಿಕಿತ್ಸೆಯ ಯಾವ ಕಾಯಿಲೆಗೆ ಬಳಸಲಾಗುತ್ತದೆ?


ಅಲ್ಜೀಮರ್ಸ ಕಾಯಿಲೆ (Alzheimer's disease)


ಆತಂಕ ಅಥವಾ ಒತ್ತಡ


ಆಟಿಸಂ (autism)


ಹೃದಯದ ಕಾಯಿಲೆ


ದೀರ್ಘಕಾಲದ ನೋವು (chronic pain)


ಖಿನ್ನತೆ (depression)


ಮಧುಮೇಹ


ಸ್ಪೀಚ್ತೊಂದರೆಗಳು


ಭಾವನಾತ್ಮಕ ಅನಿಯಂತ್ರಣ


ತಲೆನೋವು


ನಕಾರಾತ್ಮಕ ಮನಸ್ಥಿತಿ


ಆಘಾತದ ನಂತರದ ಒತ್ತಡದ ಅಸ್ವಸ್ಥತೆ (Post traumatic stress disorder)


ಹೆರಿಗೆಗೆ ಸಂಬಂಧಿಸಿದ ತೊಂದರೆಗಳು


ಉಸಿರಾಟದ ತೊಂದರೆಗಳು


ನಿದ್ರಾಹೀನತೆ


ಒಬ್ಸೆಸಿವ್ - ಕಂಪಲ್ಸಿವ್ ಡಿಸಾರ್ಡರ್ (Obsessive compulsive disorder)


ಸ್ಕಿಜೋಫ್ರೇನಿಯಾ (schizophrenia)


ಪಾರ್ಶ್ವವಾಯು ಮತ್ತು ನರದ ಅಸ್ವಸ್ಥತೆಗಳು (nerve disorders)



ರಾಗ- ಹಿಂದೋಳ




ಆರೋಹಣ-ಸಗ2 ಮ1 ದ1 ನಿ2 ಸ


ಅವರೋಹಣ-ಸನಿ2 ದ1 ಮ1 ಗ2 ಸ


ಹಿಂದೋಳ ರಾಗವು 8ನೇ ಮೇಳಕರ್ತ ರಾಗದ ಹನುಮಥೋಡಿಯ ಜನ್ಯ ರಾಗವಾಗಿದೆ. ಈ ರಾಗವನ್ನು 20ನೇ ಮೇಳಕರ್ತ ರಾಗ ನಠಭೈರವಿಯಿಂದ ಕೂಡ ಪಡೆಯಬಹುದು. ಹಿಂದೂಸ್ಥಾನಿ ಸಂಗೀತದಲ್ಲಿ ಇದನ್ನು ರಾಗ ಮಾಲ್ಕೌಂಸ್ (malkauns) ಎಂದು ಕರೆಯಲಾಗುತ್ತದೆ. ಇದು ಭಾವಪೂರ್ಣ, ಸೌಮ್ಯ, ಮೋಡಿಮಾಡುವ, ಆಹ್ಲಾದಕರವಾದ ಧ್ಯಾನಸ್ಥ ರಾಗವಾಗಿದೆ. 

.

ರಾಗ ಹಿಂದೋಳದ ಪ್ರಯೋಜನಗಳು


• ಮಾನಸಿಕ ಅಸ್ವಸ್ಥತೆಯನ್ನುಗುಣಪಡಿಸುತ್ತದೆ.


• ತೊಂದರೆಗೀಡಾದ ಮನಸ್ಸನ್ನು ಶಮನಗೊಳಿಸುತ್ತದೆ.


• ಆಂತರಿಕ ಶಾಂತಿಯನ್ನು ಮರುಸ್ಥಾಪಿಸುತ್ತದೆ.


• ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ.


• ಮನಸ್ಸಿನ ಧೈರ್ಯವನ್ನು ಹೆಚ್ಚಿಸುತ್ತದೆ.


• ಸಹಾನುಭೂತಿಯ (compassion )ಭಾವನೆಯನ್ನು ಹೆಚ್ಚಿಸುತ್ತದೆ.


• ಆತಂಕವನ್ನು ಕಡಿಮೆ ಮಾಡುತ್ತದೆ.


• ದೇಹದ ಶಕ್ತಿಯನ್ನು ಮರುಪೂರಣಗೊಳಿಸುತ್ತದೆ.


• ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಪರಿಹಾರವನ್ನು ನೀಡುತ್ತದೆ.


• ದೇಹದ ಉಷ್ಣತೆ, ಶಾಂತ ನಿದ್ರೆ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


• ಜೀರ್ಣಶಕ್ತಿಯನ್ನುಸುಧಾರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನುಗುಣಪಡಿಸುತ್ತದೆ.


• ಈ ರಾಗವು ದೈವಿಕ  ಭಕ್ತಿಯನ್ನುತಿಳಿಸುತ್ತದೆ ಮತ್ತು ವಿಶೇಷವಾಗಿ ಬೆಳಿಗ್ಗೆ ಹಾಡಿದಾಗ ಅದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.


ಡಾ. ರಶ್ಮಿಭಟ್

      ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ


0 Comments

Post a Comment

Post a Comment (0)

Previous Post Next Post