ಇನ್‌ಫೋಸಿಸ್ ವತಿಯಿಂದ ಮುಲ್ಕಿ ಘಟಕಕ್ಕೆ ಕಂಪ್ಯೂಟರ್ ವಿತರಣೆ

Upayuktha
0

 

ಮುಲ್ಕಿ: ಜ. 14 ಶುಕ್ರವಾರದಂದು ಮುಲ್ಕಿ ಘಟಕದ ವಾರದ ಕವಾಯತು ಗಾಂಧಿ ಮೈದಾನ ಕಾರ್ನಾಡ್ ಮುಲ್ಕಿ, ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಲ್ಕಿ ಘಟಕಕ್ಕೆ ಇನ್‌ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್‌ಅನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿಯಾದ ಶ್ರೀ ಲೋಕೇಶ್ ಇವರಿಗೆ ಹಸ್ತಾಂತರಿಸಿದರು.


ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳ ವಾರದ ಕವಾಯತಿನ ಹಾಜರಾತಿಗಳನ್ನು ಕಂಪ್ಯೂಟರ್ ಮೂಲಕವೆ ಕಳುಹಿಸುವಂತೆ ಸೂಚಿಸಿದರು. ಕಾಗದ ರಹಿತ ಕಛೇರಿ ಆಗಬೇಕೆಂದು ನುಡಿದರು. ಈ ಸಂದರ್ಭದಲ್ಲಿ ನಿವೃತ ಆರೋಗ್ಯ ನಿರೀಕ್ಷಕರಾದ ವೆಂಕಟರಮಣ, ಮುಲ್ಕಿ ಘಟಕದ ಹಿರಿಯ ಗೃಹರಕ್ಷಕರಾದ ಅಶ್ರಫ್ ಹುಸೇನ್, ಜಯ ಹಾಗೂ ಮುಲ್ಕಿ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಮತ್ತು ಮಂಗಳೂರು ಘಟಕದ ಗೃಹರಕ್ಷಕರಾದ ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top