ಜಾನಪದ ಶೈಲಿಯ ತ್ರಿಪದಿ
ಕೊಳ್ಳಿರಿ ಬೆಲ್ಲವ ಎಳ್ಳಿsನ ಜೊತೆಯsಲಿ
ಒಳ್ಳೆಯ ಮಾತು ಆಡುsತ |ದಿನನಿತ್ಯ|
ಜಳ್ಳನು ತೂರಿ ಸಾಗುsತ ||೧||
ಕಬ್ಬನು ಹಂಚುತ ಹಬ್ಬವ ಮಾಡೋsಣ
ಕೊಬ್ಬರಿ ತುರಿಯ ಬೆರೆಸುsತ |ಸವಿಯಲು|
ತಬ್ಬಿದ ಬಂಧು ಬಳಗsವ||೨||
ಸೂರಿಯ ನಡೆಯುವ ದಾರಿsಯ ಬದಲಿಸೆ
ನಾರಿಗೆ ಮನೆಲಿ ಸಂಭ್ರsಮ| ಎಲ್ಲೆಡೆ|
ಕೋರುತ ಶುಭದ ಸಡಗರ||೩||
ರಾಶೀಯ ಸಂಚಾರ ತೋಷsವ ತಂದಿದೆ
ಕೋಶsದಿ ದವಸ ತುಂಬsಲು|ಕಣಜದಿ
ದೇಶsದ ಜನತೆ ಸುಖವಾಗಿ ||೪||
ನೆಲದಾಯಿ ಭೂದೇವಿ ಹೊಲದಾಗೆ ಬೆಳೆದಿsಹ
ಕುಲದೇವ ಪೂಜೆ ಮಾಡುತ| ಸುಮಗsಳ|
ಜಲದೇವಿ ನಮಿಸಿ ನಿಲ್ಲುsತ ||೫||
ಸುಗ್ಗಿಯ ಕಾಲದ ಹಿಗ್ಗೀನ ಕುಣಿತಕೆ
ಮೊಗ್ಗಿನ ಮಾಲೆ ಮುಡಿಯುತ| ನೀರೇರು|
ಕುಗ್ಗದೆ ನಗುವ ಸೂಸುsತ ||೬||
ರಚನೆ: ಲಕ್ಷ್ಮೀ ವಿ ಭಟ್, ಮಂಜೇಶ್ವರ
ಸಂಗೀತ ಸಂಯೋಜನೆ, ಗಾಯನ: ಪ್ರಸನ್ನಾ ಸಿ.ಎಸ್ ಭಟ್ ಕಾಕುಂಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ