|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಗೀತ ಮತ್ತು ಮೆದುಳು (effects of music on brain)

ಸಂಗೀತ ಮತ್ತು ಮೆದುಳು (effects of music on brain)



ಸಂಗೀತವು ಮೆದುಳಿನ ಕಾರ್ಯ (brain function) ಮತ್ತು ಮಾನವನ ನಡವಳಿಕೆಯ (human behaviour) ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಸಂಗೀತವು ಒತ್ತಡ, ನೋವು ಮತ್ತು ಖಿನ್ನತೆಯ ಲಕ್ಷಣಗಳನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಅರಿವಿನ ಮತ್ತು ಮೋಟಾರು ಕೌಶಲ್ಯಗಳನ್ನು (motor skills) ಸುಧಾರಿಸುತ್ತದೆ? ಸಂಗೀತವು ನ್ಯೂರೋಜೆನೆಸಿಸ್ಗೆ, (neurogenesis) (ನರಕೋಶಗಳನ್ನು ಉತ್ಪಾದಿಸುವ ಮೆದುಳಿನ ಸಾಮರ್ಥ್ಯ) ಹೇಗೆ ಸಹಾಯ ಮಾಡುತ್ತದೆ?


ಆಲ್ಝೈಮರ್ಸ್ (Alzheimer's) ಮತ್ತು ಪಾರ್ಕಿನ್ಸನ್‌ನಂತಹ (Parkinson's) ನ್ಯೂರೋ ಡಿಜೆನೆರೆಟಿವ್ (neuro degenerative) ಕಾಯಿಲೆಗಳಿರುವ ಜನರು ಸಂಗೀತಕ್ಕೆ ಧನಾತ್ಮಕವಾಗಿ ಪ್ರತಿಕ್ರಯಿಸುತ್ತಾರೆ.


ನಾವು ಸಂಗೀತವನ್ನು ಕೇಳಿದಾಗ, ಸಂಕೇತಗಳು (signals) ನಮ್ಮ ಕಿವಿಯಿಂದ ಮೆದುಳಿಗೆ ರವಾನೆಯಾಗುತ್ತವೆ. ನಾವು ಸಂಗೀತವನ್ನು ಕೇಳಿದಾಗ ಮೆದುಳಿನ ವಿವಿಧ ಪ್ರದೇಶಗಳನ್ನು ಉತ್ತೇಜಿಸಲಾಗುತ್ತದೆ ಹೀಗೆ ನಮ್ಮ ಮೆದುಳಿನ ಕಾರ್ಯಗಳನ್ನು ಸುಧಾರಿಸುತ್ತದೆ.



ಮೆದುಳಿನ ಮುಂಭಾಗವು (frontal lobe) ಯೋಜನೆ, ಆಲೋಚನೆ ಮತ್ತು ನಿರ್ಧಾರ ತೆಗೆದುಕೊಳ್ಳಲು ಬಳಸಲಾಗುತ್ತದೆ. ಸಂಗೀತವನ್ನು ಕೇಳುವ ಮೂಲಕ, ನಾವು ಅದರ ಕಾರ್ಯಗಳನ್ನು ವರ್ಧಿಸಬಹುದು. ನಾವು ಕೇಳುವುದನ್ನು ಟೆಂಪೂರಲ್ ಲೋಬ್(temporal lobe) ಪ್ರಕ್ರಿಯಗೊಳಿಸುತ್ತದೆ.


ನಾವು ಸಂಗೀತವನ್ನು ಪ್ರಶಂಸಿಸಲು ಭಾಷಾ ಕೇಂದ್ರವನ್ನು ಬಳಸುತ್ತೇವೆ, (language center) ಅದು ಮೆದುಳಿನ ಎರಡೂ ಬದಿಗಳನ್ನು ವ್ಯಾಪಿಸುತ್ತದೆ, ಆದರೂ ಭಾಷೆ ಮತ್ತು ಪದಗಳನ್ನು ಎಡಭಾಗದಲ್ಲಿ (left hemisphere) ಅರ್ಥೈಸಲಾಗುತ್ತದೆ ಆದರೆ ಸಂಗೀತ ಮತ್ತು ಶಬ್ದ ಬಲಭಾಗದಲ್ಲಿ (right hemisphere) ಅರ್ಥೈಸಲ್ಪಡುತ್ತವೆ. ಮೆದುಳಿನ ಬ್ರೋಕಾಸ್ ಪ್ರದೇಶವು (brocas area)ಮಾತು ಮತ್ತು ಸಂವಹನಕ್ಕೆ ಸಹಾಯ ಮಾಡುತ್ತದೆ ಆದ್ದರಿಂದ ಹಾಡುವುದು ಅಥವಾ ವಾದ್ಯವನ್ನು ನುಡಿಸುವುದು ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಸಂಗೀತವನ್ನು ವಿಶ್ಲೇಷಿಸಲು ಮತ್ತು ಆನಂದಿಸಲು ನಾವು ಮೆದುಳಿನ ಈ ಭಾಗವನ್ನು ಬಳಸುತ್ತೇವೆ- ನ್ಯೂಕ್ಲಿಯಸ್ ಅಕ್ಯುಂಬೆನ್ಸ್‌. ಇದು ಸಂತೋಷ ಕೂಡುವ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ.


ಸಂಗೀತವು ಭಯವನ್ನು ನಿಯಂತ್ರಿಸುತ್ತ. ನೆನಪುಗಳನ್ನು ಉತ್ಪಾದಿಸಿ, ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ನಮಗೆ ಸಹಾಯ ಮಾಡುತ್ತದೆ.


"ಸಂಗೀತವು ಹಿಪೊಕ್ಯಾಂಪಸ್‌ನಲ್ಲಿ (hippocampus) ನ್ಯೂರೋಜೆನೆಸಿಸ್ ಅನ್ನು ಹೆಚ್ಚಿಸಬಹುದು, ಹೊಸ ನ್ಯೂರಾನ್‌ಗಳ ಅಥವಾ ನರಗಳ ಉತ್ಪಾದನೆಯನ್ನು ಅನುಮತಿಸುತ್ತದೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ


ಮೆದುಳಿನ ಮೇಲೆ ಸಂಗೀತದ ಶಕ್ತಿ-

• ಭಯವನ್ನು ಕಡಿಮೆ ಮಾಡುತ್ತದೆ

• ರೋಗಗಳನ್ನು ಕಡಿಮೆ ಮಾಡಿ ನಿಮ್ಮನ್ನು ಉತ್ತಮ ಸಂವಹನಕಾರರನ್ನಾಗಿ ಮಾಡುತ್ತದೆ

• ಬಲಶಾಲಿಯನ್ನಾಗಿ ಮಾಡುತ್ತದೆ

• ಇಮ್ಯೂನ್ ಸಿಸ್ಟಮ್ ಅನ್ನು ಹೆಚ್ಚಿಸುತ್ತದೆ

• ಮೆದುಳಿನ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ 

• ಜ್ಞಾಪಕ  ಶಕ್ತಿಯನ್ನು ಹೆಚ್ಚಿಸುತ್ತದೆ 

• ಪಾರ್ಕಿನ್ಸನ್ ರೋಗಿಗಳ ಸುಧಾರಣೆಗೆ ಸಹಾಯ ಮಾಡುತ್ತದೆ

ಸಂಗೀತವು ಗಾಳಿಯಲ್ಲಿ ಚಲಿಸುವ ಕಂಪನಗಳನ್ನು(vibrations) ಉತ್ಪಾದಿಸುತ್ತದೆ. ಈ ಕಂಪನಗಳು ಕಿವಿ ಕಾಲುವೆಯನ್ನು(ear canal) ತಲುಪುತ್ತವೆ ಮತ್ತು ಶ್ರವಣೇಂದ್ರಿಯ ನರದ(auditory nerve) ಮೂಲಕ ಮೆದುಳನ್ನು ತಲುಪಿ ವಿದ್ಯುತ್ ಸಂಕೇತಗಳಾಗಿ (electrical signals) ಪರಿವರ್ತನೆಗೊಳ್ಳುತ್ತವೆ. ಸಂಗೀತವು ನಮ್ಮ ಮೆದುಳಿಗೆ ಪ್ರವೇಶಿಸಿದಾಗ, ಅದು ನಮಗೆ ಸಂತೋಷವನ್ನುಂಟುಮಾಡುವ ಡೋಪಮೈನ್ (dopamine) ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಆನಂದ ಕೇಂದ್ರಗಳ ಪ್ರಚೋದನೆಗೆ ಕಾರಣವಾಗುತ್ತದೆ. ಇದು ಮೆದುಳಿನ ತ್ವರಿತ ಪ್ರತಿಕ್ರಿಯೆಯಾಗಿದೆ (quick response). ಆದ್ದರಿಂದ ನಾವು ಒತ್ತಡಕ್ಕೊಳಗಾದಾಗ ಅಥವಾ ಉದ್ವೇಗಗೊಂಡಾಗ ಸಂಗೀತವನ್ನು ಕೇಳಿದರೆ ಅದು ನಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಸಂಗೀತವನ್ನು ಕೇಳುವುದರಿಂದ ನಮ್ಮ ದೇಹದ ಜೀವಕೋಶಗಳನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಂಟಿಬಾಡಿಗಳನ್ನು ಹೆಚ್ಚಿಸುತ್ತದೆ. ಸಂಗೀತ ವಾದ್ಯವನ್ನು ನುಡಿಸುವುದು ಅಥವಾ ಸಂಗೀತ ಅಭ್ಯಾಸ ಮಾಡುವುದರಿಂದ ಮಕ್ಕಳ  ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.


ನಾವು ವ್ಯಾಯಾಮ (physical exercise) ಮಾಡಿದರೆ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತೇವೆ (increased musclemass and strength) ಮತ್ತು ಬಲಶಾಲಿಯಾಗುತ್ತೇವೆ. ಹಾಗೆಯೇ ಮೆದುಳಿಗೆ ವ್ಯಾಯಾಮ ಮಾಡಿದರೆ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಚಟುವಟಿಕೆಗಳನ್ನು ಮಾಡಿದರೆ ಮೆದುಳಿನಲ್ಲಿ ಗ್ರೇ ಮಾಟರ್ (gray matter) ಹೆಚ್ಚಾಗುತ್ತದೆ.

ಸಂಗೀತವು ಮೆಮೊರಿ, ಕಲಿಕೆ ಮತ್ತು ಶ್ರವಣೇಂದ್ರಿಯ ಪ್ರಕ್ರಿಯೆಯನ್ನು (learning and auditory processing) ಸುಧಾರಿಸುತ್ತದೆ.


ರಾಗ-ಯಮುನ ಕಲ್ಯಾಣಿ

ಆ-ಸ ರಿ₂ ಗ₃ ಪ ಮ₂ ಗ₃ ಪ ದ₂ ನಿ₃ ದ₂ ಸ

ಅವ-ಸ ನಿ₃ ದ₂ ಪ ಮ₂ ಗ₃ ಮ₁ ರಿ₂ ಸ

ಯಮುನಕಲ್ಯಾಣಿ ರಾಗವು 65 ನೇ ಮೇಳಕರ್ತ ರಾಗದ ಮೇಚಕಲ್ಯಾಣಿಯ ಜನ್ಯ ರಾಗವಾಗಿದೆ. ಈ ರಾಗವು ಹಿಂದೂಸ್ತಾನಿ ಸಂಗೀತದಲ್ಲಿ ಯಮನ್ ಕಲ್ಯಾಣ ರಾಗಕ್ಕೆ ಸಮನಾಗಿರುತ್ತದೆ. ಇದು ಶಾಂತಿಯುತ ಹಿತವಾದ ರಾಗವಾಗಿದೆ.


ಯಮುನಾ ಕಲ್ಯಾಣಿ ರಾಗದ ಪ್ರಯೋಜನಗಳು-

• ಇದು ಗಾಯಕ ಮತ್ತು ಕೇಳುಗರಿಗೆ ಶಕ್ತಿಯನ್ನು ನೀಡುತ್ತದೆ

• ಇದು ಕ್ರಿಯಾಶೀಲತೆಯನ್ನು ನೀಡುತ್ತದೆ

• ಈ ರಾಗವು ಆರೋಗ್ಯಕರ ಮನಸ್ಸು ಮತ್ತು ದೇಹಕ್ಕೆ ಶಕ್ತಿ ವರ್ಧಕ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ

• ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ

• ಈ ರಾಗವು ತಾಯಿಯಲ್ಲಿ ಮತ್ತು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನಲ್ಲಿ ಸಂತೋಷವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ

• ಹಿತವಾದ ಮತ್ತು ಆಹ್ಲಾದಕರವಾದ ರಾಗವು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.


-ಡಾ. ರಶ್ಮಿ ಭಟ್

ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post